Haridasa Sahitya — Vyasadasa

Venkatesha Mahatme Sulaadi 36 — Sri venkatesha lochana sulaadhi

ಸುಳಾದಿ ೩೬ — ಶ್ರೀ ವೇಂಕಟೇಶ ಲೋಚನ ಸುಳಾದಿ

Composer: Vijaya Dasaru · Deity: Venkatesha · Genre: Sulaadi

Kannada lyrics

ಶ್ರೀ ವೇಂಕಟೇಶ ಲೋಚನ ಸುಳಾದಿ ರಾಗ ಭೈರವಿ ಧ್ರುವತಾಳ ಚಂದ್ರಮಂಡಲ ಪೋಲುವ ಇಂದಿರಾ ಮಗವನ ಚಂದದಿಂದಲಿ ಬಿಡದೆ ನಿರೀಕ್ಷಿಸುವ ಲೋಚನ ಮಂದಹಾಸ ಶೀತಳವಾಗಿ ಪಾದವನು ಪೊಂದಿದ ಭಕ್ತರನು ನೋಡುವ ಲೋಚನ ವಂದಿಸಿ ಕೊಂಡಾಡಿ ಒಂದೇ ಭಕ್ತಿಯಲ್ಲಿ ದೇವನ ನಂಬಲು ನಂದದಿಂದಲಿ ಸುಧಾಬಿಂದು ಗರೆಯುವ ಲೋಚನ ಅಂದು ಪ್ರಹ್ಲಾದಗೆ ಕಂಭದಿಂದಲಿ ಒಲಿದು ಬಂದು ಹರಳವಾಗಿ ಕಿಡಿ ತೋರಿದ ಲೋಚನ ವೃಂದದೊಳಗೆ ಸಕಲ ವೃಕ್ಷಜಾತಿಗೆ ಮಿಗಲು ಎಂದೆನಿಸುವ ತುಳಸಿ ಪೆತ್ತ ಲೋಚನ ಕಂದರ್ಪಪಿತ ನಮ್ಮ ವಿಜಯವಿಠ್ಠಲ ನಿನ್ನ ದ್ವಂದ್ವಾನಂತ ಪೊಳೆಯುವ ಸುಲೋಚನ ॥ ೧ ॥ ಮಠ್ಯತಾಳ ಸರಸೀರುಹದಳ ಮರಿಸಿದ ಲೋಚನ ಕರಿಯ ಮೇಲೆ ದಯಾ ಹರಿಸಿದ ಲೋಚನ ಕರು ಬಲದಾಯುಷ್ಯ ಹರಿಸಿದ ಲೋಚನ ಅರುಣ…