Haridasa Sahitya — Vyasadasa

Venkatesha Mahatme Sulaadi 35 — Karna mahima sulaadhi

ಸುಳಾದಿ ೩೫ — ಶ್ರೀ ವೇಂಕಟೇಶದೇವರ ಕರ್ಣಮಹಿಮಾ ಸುಳಾದಿ

Composer: Vijaya Dasaru · Deity: Venkatesha · Genre: Sulaadi

Kannada lyrics

ಶ್ರೀ ವೇಂಕಟೇಶದೇವರ ಕರ್ಣಮಹಿಮಾ ಸುಳಾದಿ ರಾಗ ಕಲ್ಯಾಣಿ ಧ್ರುವತಾಳ ಮಕರ ಕುಂಡಲದಿಂದ ಝಗಝಗಿಸುವ ಕರ್ಣ ಲಕುಮಿ ಬಿನ್ನೈಸಲು ಲಾಲಿಸುವ ಕರ್ಣ ಅಖಿಳ ಜೀವರು ಮೊರೆಯಿಡಲು ಕೇಳುವ ಕರ್ಣ ಮುಕ್ತಾಮುಕ್ತರಿಂದ ವರ್ಣಿಸಿಕೊಂಬ ಕರ್ಣ ಚಿಕ್ಕ ಮಕ್ಕಳಿಂದಲಿ ಲಿಚ್ಚಿಪ್ಪಡಿಸಿದ ಕರ್ಣ ಸುಖಸಾಂದ್ರವಾಗಿದ್ದ ಸುರಳಿತವಾದ ಕರ್ಣ ಮಕ್ಕಳ ಮಣಿಸುನಿಲಯ ವಿಜಯವಿಠ್ಠಲ ಭಕ್ತರಿಗಗೋಚರವಾದ ಸುವರ್ಣ ಕರ್ಣ ॥ ೧ ॥ ಮಟ್ಟತಾಳ ಪಂಜರದೋಲಿಯನು ಧರಿಸಿದ ಶುಭ ಕರ್ಣ ಕುಂಜರಪತಿ ಕೂಗೆ ಕೇಳಿದ ಮಹ ಕರ್ಣ ಆಂಜನೇಯನ ಕೂಡ ಕಾಂತವಾಡಿದ ಕರ್ಣ ನಂಜೇಶನ ಮೈಗೆ ಪೊಂದಿ ಪೊಳೆಯುವ ಕರ್ಣ ಮುಂಜಿಕೇಶಾಕ್ಷಮಣ ವಿಜಯವಿಠ್ಠಲನ ನಿರಂಜನ ನಿರ್ಗುಣ ನಿರಾಧಾರ ಕರ್ಣ ॥ ೨ ॥ ತ್ರಿವಿಡಿತಾಳ…