Haridasa Sahitya — Vyasadasa

Venkatesha Mahatme Sulaadi 34 — Vadana mahima sulaadhi

ಸುಳಾದಿ ೩೪ — ಶ್ರೀ ವೇಂಕಟೇಶದೇವರ ವದನ ಮಹಮಾ ಸುಳಾದಿ

Composer: Vijaya Dasaru · Deity: Venkatesha · Genre: Sulaadi

Kannada lyrics

ಶ್ರೀ ವೇಂಕಟೇಶದೇವರ ವದನ ಮಹಮಾ ಸುಳಾದಿ ರಾಗ ಬೃಂದಾವನ ಸಾರಂಗ ಧ್ರುವತಾಳ ಶ್ರೀರಮಣಿ ಕೂಡ ಏಕಾಂತವಾಡುವ ವದನ ಸಾರ ಸುಂದರವಾದ ವದವದನ ಚಾರು ಶೋಭಿಪ ದಂತ ಪಂಕ್ತಿ ಎಸವ ವದನ ಕಾರುಣ್ಯದಲ್ಲಿ ಸೋನೆಗೆರೆವ ವದನ ವಾರಿಜೋದ್ಭವಗೆ ಉಪದೇಶ ಪೇಳಿದ ವದನ ಚೋರತನದಲ್ಲಿ ಬೆಣ್ಣೆ ಸವಿದ ವದನ ಸಾರಿಸಾರಿಗೆ ನಗಲು ರತ್ನ ಉದುರುವ ವದನ ನಾರಿಯರಧರವ ಚುಂಬಿಸುವ ವದನ ಕಾರುಣ್ಯನಿಧಿ ಕಾಮಿಕಾಂತ ವಿಜಯವಿಠ್ಠಲ ಶೌರಿಯ ಚಿತ್ರ ವಿಚಿತ್ರ ವದನ ॥ 1 ॥ ಮಟ್ಟತಾಳ ಯಶೋದೆ ದೇವಿಯ ಅಮ್ಮೆ ಉಂಡ ವದನ ಅಸುರ ಪೂತನಿಯ ವಿಷವ ಹೀರಿದ ವದನ ಶಿಶುವಿನ ಲೀಲೆಯಲ್ಲಿ ಮಣ್ಣು ಮೆದ್ದ ವದನ ಬಸುರೊಳಗೆ ಬ್ರಹ್ಮಾಂಡ ತೋರಿದ ವದನ ಪಶುಗಳು ತರದಾ ಮಲ್ಲಿ ಚಪ್ಪರಿಸಿದ ವದನ ಹಸುಮಕ್ಕ…