Haridasa Sahitya — Vyasadasa

Venkatesha Mahatme Sulaadi 33 — Udar sulaadhi

ಸುಳಾದಿ ೩೩ — ಶ್ರೀ ವೇಂಕಟೇಶನ ಉದರ ಸುಳಾದಿ

Composer: Vijaya Dasaru · Deity: Venkatesha · Genre: Sulaadi

Kannada lyrics

ಶ್ರೀ ವೇಂಕಟೇಶನ ಉದರ ಸುಳಾದಿ ರಾಗ ಬೇಹಾಗ್ ಧ್ರುವತಾಳ ಕಮಲಾ ಕಮಲಾಸನದಿಂದೊಪ್ಪುವ ಪೊಕ್ಕ- ಳಮಲವಾಗಿ ಮೆರೆವ ಬಲುಕಾಂತಿಯಾದ ಉದರ ಸಮ ವಿಷಮವಿಲ್ಲದೆ ನೋಳ್ವ ಕಂಗಳಿಗೆ ಸಮತಳವಾಗಿ ವಿರಾಜಿಸುವ ಉದರ ಶಮದಮವಾನಂತ ಗುಣಪರಿಪೂರ್ಣವಾದ ಪ್ರಮೆಗಳು ತುಂಬಿದ ಕಲುಷಹರ ಉದರ ದಮುನಾಮ ನಮ್ಮ ವಿಜಯವಿಠ್ಠಲೇಶನ ನಮಿಸಿದವರ ಮನಕೆ ಬೆಡಗುತೋರುವ ಉದರ ॥ 1 ॥ ಮಟ್ಟತಾಳ ಕವರ್ತನದಲ್ಲಿರೆ ಒಡಲ ಒಳಗೆ ಅವನಿಯನ್ನು ಸರ್ವಿಸಿದ ಉದರ ಪವಳತಿ ಮಾಣಿಕ ನವ ಮೌಕ್ತಿಕ ಹಾರ ರವಿಯಂದದಲಿ ತೂಗುವ ಶೃಂಗಾರುದರ ನಿರ್ತಾಯಾತ್ಮಾನಾಮಾ ವಿಜಯವಿಠ್ಠಲರೇಯಾ ಭುವನತ್ರಯದೊಳಗೆ ಧವಳವರ್ಣ ಉದರ ॥ 2 ॥ ತ್ರಿವಿಡಿತಾಳ ಗುಣತ್ರಯಗಳ ಬಿಡದೆ ಹೊಂದಲಿಟ್ಟ ಉದರ ಗಣನೆಯಿಲ್ಲದ ಜೀವರಾಶಿ…