Haridasa Sahitya — Vyasadasa
Venkatesha Mahatme Sulaadi 32 — Hasta mahima sulaadhi
ಸುಳಾದಿ ೩೨ — ಶ್ರೀ ವೇಂಕಟೇಶದೇವರ ಹಸ್ತ ಮಹಮಾ ಸುಳಾದಿ
Composer: Vijaya Dasaru · Deity: Venkatesha · Genre: Sulaadi
Kannada lyrics
ಶ್ರೀ ವೇಂಕಟೇಶದೇವರ ಹಸ್ತ ಮಹಮಾ ಸುಳಾದಿ ರಾಗ ಬಿಲಹರಿ ಝಂಪೆತಾಳ ಮಣಿಮಯಾತಿ ಕಿರಣ ಕಂಕಣ ಶೋಭಿತದ ಹಸ್ತ ಘನ ಮಹಿಮ ಲಕ್ಷ್ಮಿಯ ತಕ್ಕೆಬೀಸುವ ಹಸ್ತ ಮನುಜ ವಿಗ್ರಹನಾಗಿ ನಂದರ್ರಜದಲ್ಲಿ ಮಾ- ನುನಿಯರ ಮನೆಯಾನವನೀತ ಕದ್ದ ಹಸ್ತ ಅನುವಾರದೊಳು ಫಲ್ಗುಣಗಲಿದು ದಿವ್ಯ ತೇ- ರನು ಹಿಡಿದು ವಾಜಿಯನ್ನು ನಲಿದು ನಡೆಸಿದ ಹಸ್ತ ಘನಗಿರಿಯ ವಾಸಾ ಸರ್ವೇಶ ತಿಮ್ಮಲೇಶ ಎನಗಲಿದ ವಿಜಯವಿಠ್ಠಲದೇವನ ಹಸ್ತ ॥ 1 ॥ ಮಟ್ಟತಾಳ ಬಿಲ್ಲು ಮುರಿದ ಹಸ್ತ ಚಳ್ಳುಗುರಿನ ಹಸ್ತ ಪಲ್ಲ ವಾರುಣ ಹಸ್ತ ಮಲ್ಲಮರ್ದನ ಹಸ್ತ ತಲ್ಲಿ ಸವಿದ ಹಸ್ತ ಜಲಧಿ ಎಚ್ಚದ ಹಸ್ತ ಬಲ್ಲಿದ ವಿಜಯವಿಠ್ಠಲದೇವನ ಹಸ್ತ ॥ 2 ॥ ರೂಪಕತಾಳ ಕಮಲಸಂಭವಗೆ ಆಗಮವನಿತ್ತ ಹಸ್ತ ರಮಣಿಗೋಸುಗ ಪಾರಿಜಾತ…