Haridasa Sahitya — Vyasadasa

Venkatesha Mahatme Sulaadi 31 — Nakha mahima sulaadhi

ಸುಳಾದಿ ೩೧ — ಶ್ರೀ ವೇಂಕಟೇಶದೇವರ ನಖದ ಮಹಮಾ ಸುಳಾದಿ

Composer: Vijaya Dasaru · Deity: Venkatesha · Genre: Sulaadi

Kannada lyrics

ಶ್ರೀ ವೇಂಕಟೇಶದೇವರ ನಖದ ಮಹಮಾ ಸುಳಾದಿ ರಾಗ ಹಿಂದೋಳ ಧ್ರುವತಾಳ ಇಂದಿರಾ ದೇವಿ ಗುಣಿಸಿ ಎಣಿಸುವನೆಂದು ಒಂದು ಸಾರಿ ನೋಡಲು ಬೆಡಗು ತೋರಿದ ನಖ ಅಂದು ಒಂದೊಂದು ಪರಿ ಪರಿ ನಯಂಗಳ ತೋರಿ ಅಂದವಾಗಿ ಪೊಳೇದಮಾಯಾಲೀಲಾದ ನಖ ಮಂದಮತಿಗಳು ನಮಿಸಲವರ ಪಾಪ- ವೃಂದಾವ ಕಳೆದು ಸುಜ್ಞಾನ ಕೊಡುವ ನಖ ಕೇಂದದನಾಮಾಸಿರಿ ವಿಜಯವಿಠ್ಠಲ ನಿನ್ನ ಸುಂದರ ನಖಗಳಿಗೆ ನಮೋ ನಮಃ ಎಂಬೆ ॥ 1 ॥ ಮಟ್ಟತಾಳ ಬಲಿಯ ಮನೆಗೆ ಹೋಗಿ ನೆಲನ ದಾನವ ಬೇಡಿ ಜಲಜಾಂಡಕೆ ಬೆಳೆದು ಬಲಿದ ಖರ್ಪರವನ್ನು ಪಿಳಿಸಿ ಸೀಳಿದ ನಖ ಕಿಲಿಕಿಲಿ ನಗುತ ಗೋರ್ವಳ ಸತಿಯರ ಮಗೆಗ- ಮಲೆಯ ಮೇಲೆ ತುಳಿಯುತ್ತ ವಲಿದು ವರ್ತಿಸಿದ ನಖ ಕಲಕಾಲ ಮುನಿಗಳು ವೊಲಿಸಿ ವೊಲಿಸಿ ನೋಡ his ೆ ನೆಳಲಗಾಣದೆ ಹೋಗಿ…