Haridasa Sahitya — Vyasadasa
Venkatesha Mahatme Sulaadi 30 — Alagiri charana mahatme sulaadhi
ಸುಳಾದಿ ೩ — ಅಳಗಿರಿವಾಸನ ದೇವರ ಚರಣ ಮಹಾತ್ಮೆ ಸುಳಾದಿ
Composer: Vijaya Dasaru · Deity: Venkatesha · Genre: Sulaadi
Kannada lyrics
ಅಳಗಿರಿವಾಸನ ದೇವರ ಚರಣ ಮಹಾತ್ಮೆ ಸುಳಾದಿ ರಾಗ ಚಾರುಕೇಶಿ ಧ್ರುವತಾಳ ಹದಿನಾಲ್ಕು ಲೋಕದಲ್ಲಿ ಪೂಜೆಗೊಂಬ ಚರಣ ಸುಧಾಕರ ನಂದದಲ್ಲಿ ಹೊಳೆವ ಸುಂದರ ಚರಣ ಪದೊ ಪದಿಗೆ ನಾರದನ ವದನದಿ ನೆನೆವ ಚರಣ ಮೃದುವಾದ ದಿವ್ಯ ಚರಣ ಕದನದಲ್ಲಿ ನರನ ರಥ ಮುಂಬಿನಲ್ಲಿ ಇದ್ದ ಚರಣ ಅಧೋ ಭುವನಾಶ್ರಯವಾಗಿದ್ದ ಚರಣ ನಿದರ್ಶನವಾಗಿ ನಿತ್ಯ ತೋರುವ ಚರಣ ಸದಮಲವಾದ ಚರಣ ಚದುರ ಅಳಗಿರಿ ತಿಮ್ಮ ವಿಜಯವಿಠ್ಠಲ ಸಾರ- ಹೃದಯರಿಗೆ ವೊಲಿದು ಸಂಪದವಿ ಕೊಡುವ ಚರಣ ॥ 1 ॥ ಮಟ್ಟತಾಳ ಸನಕಸನಂದರ ಮನಕೆ ಹೊಳೆವ ಚರಣ ದನುಜಕುಲ ಸಂಹರಣ ಮಾಡುವ ಚರಣ ಕನಕಮಯವಾಗಿ ಪೋಲುವ ಸಿರಿ ಚರಣ ಘನ ವೃಷಭಾದ್ರಿಯಲಿ ನಿಂದ ವಿಜಯವಿಠ್ಠಲ ಅನುಗಾಲ ಎನ್ನ ಸಾಕ್ವ ಶುಭಚರಣ ॥ 2 ॥ ತ್ರಿವಿಡಿತಾಳ…