Haridasa Sahitya — Vyasadasa

Venkatesha Mahatme Sulaadi 28 — Charana stotra sulaadhi

ಸುಳಾದಿ ೨೮ — ಶ್ರೀವೇಂಕಟೇಶದೇವರ ಚರಣಸ್ತೋತ್ರ ಸುಳಾದಿ

Composer: Vijaya Dasaru · Deity: Venkatesha · Genre: Sulaadi

Kannada lyrics

ಶ್ರೀವೇಂಕಟೇಶದೇವರ ಚರಣಸ್ತೋತ್ರ ಸುಳಾದಿ ರಾಗ ಅಭೇರಿ ಧ್ರುವತಾಳ ಧ್ವಜವಜ್ರಾಂಕುಶ ಸುಧಾಂಬುಜದಿಂದೊಪ್ಪುವ ಚರಣಾಂ- ಬುಜಪಾಣಿ ಹಸ್ತದಲ್ಲಿ ಪೂಜೆಗೊಂಬ ಚರಣ ಅಜನ ಪೊಕ್ಕಳಿಂದಲಿ ಸೃಜಿಸಿ ಅರಿಸಿದ ಚರಣ ರಜತಗಿರಿವಾಸನು ಭಜಿಪ ಸುಂದರ ಚರಣ ತ್ರಿಜಗದೊಳಗೆ ವಿರಜವಾಗಿಪ್ಪ ಚರಣ ಭುಜಗಗಿರಿವಾಸ ತಿರಿವೇಂಗಳೇಶ ವಿಜಯವಿಠ್ಠಲ ಪೂರ್ಣಾದ್ಯ ದ್ವಿಜರಾಜನಂತೆ ಪೋಲುವ ಅಜಸುತಾರ್ಚಿತ ಚರಣ ॥ 1 ॥ ಮಟ್ಟತಾಳ ಕಾಳಿಂಗನ ಪೆಡೆಯ ತುಳಿದ ಚರಣ ಬಾಲಿಯರ ಕೈಯ ಓಲಗಗೊಂಬ ಚರಣ ಮೇಲುಲೋಕವ ಪಡೆದ ಲೀಲವಾದ ಚರಣ ಘಾಳಿನಂದನನ ಕರದಿ ಮೆರೆವ ಚರಣ ಮೇಲುಗಿರಿ ತಿಮ್ಮ ವಿಜಯವಿಠ್ಠಲರೇಯಾ ಊಳಿಗದವರನು ಉದ್ದರಿಪ ಚರಣ ॥ 2 ॥ ತ್ರಿವಿಡಿತಾಳ ದಾನವಾರೆಯೆದೆಯಲ್ಲಿ ವದೆದು ನಲ…