Haridasa Sahitya — Vyasadasa

Venkatesha Mahatme Sulaadi 27 — Sri venkateshana pada sulaadhi

ಸುಳಾದಿ ೨೭ — ಶ್ರೀ ವೇಂಕಟೇಶನ ಪಾದ ಸುಳಾದಿ

Composer: Vijaya Dasaru · Deity: Venkatesha · Genre: Sulaadi

Kannada lyrics

ಶ್ರೀ ವೇಂಕಟೇಶನ ಪಾದ ಸುಳಾದಿ ರಾಗ ಹಂಸಾನಂದಿ ಧ್ರುವತಾಳ ಧ್ವಜವಜ್ರಾಂಕುಶಪಂಕಜ ಕುಂಕುಮಾಂಕಿತ ನಿಜರೇಖೆಯಿಂದೊಪ್ಪುವ ಸೃಜಿತರಹಿತ ಪಾದ ದ್ವಿಜಪನು ಪೆಗಲಲ್ಲಿ ಚರಿತವಾದ ಪಾದ ದ್ವಿಜರಾಜನಂಗಾದಿ ವಿರಾಜಿಸುವ ಪಾದ ಭುಜಗನು ಶಿರದಲ್ಲಿ ನೃತ್ಯ ವಾಡಿದ ಪಾದ ಅಜಹರಾದಿಗಳಿಂದ ಭಜನೆಗೊಂಬುದ ಪಾದ ಸುಜನರ ಮನದಲ್ಲಿ ಚಂಚಲಿಸುವ ಪಾದ ವೃಜನಂದನರ್ನಿಯಲ್ಲಿ ಸಂಚರಿಸಿದ ಪಾದ ತ್ರಿಜಗಮೋಹನು ಪಾದ ತ್ರಿಗುಣರಹಿತ ಪಾದ ವಿಜಯಾತ್ಮ ನಾಮಾಸಿರಿ ವಿಜಯವಿಠ್ಠಲ ತಿಮ್ಮ ಭುಜಗ ಗಿರಿಯ ಮೇಲೆ ಶೋಭಿಸುವ ಪಾದ ॥ 1 ॥ ಮಟ್ಟತಾಳ ಧರಿಯನಿತ್ತು ನೃಪನ ಬೆರಗುಮಾಡಿದ ಪಾದ ಕರು ಸಭೆಯನ್ನು ಹರುರುಳಿಸಿದ ಪಾದ ದುರುಳ ಶಕಟನು ಮುರಿಯಲದೆದ್ದ ಪಾದ ಮರುತನ ಕರದಲ್ಲಿ ಮೆರೆವ…