Haridasa Sahitya — Vyasadasa

Venkatesha Mahatme Sulaadi 26 — Apadamouli stotra sulaadhi

ಸುಳಾದಿ ೨೬ — ಶ್ರೀ ವೇಂಕಟೇಶದೇವರ ಮಹಿಮಾ ಅಪಾದಮೌಳಿ ಸ್ತೋತ್ರ ಸುಳಾದಿ

Composer: Vijaya Dasaru · Deity: Venkatesha · Genre: Sulaadi

Kannada lyrics

ಶ್ರೀ ವೇಂಕಟೇಶದೇವರ ಮಹಿಮಾ ಅಪಾದಮೌಳಿ ಸ್ತೋತ್ರ ಸುಳಾದಿ ರಾಗ ಬೌಳಿ ಧ್ರುವತಾಳ ಮುಕ್ತಾ ಅಮುಕ್ತರಿಂದಚ್ಯನೆಗೆಂಬ ಚರಣ ವೀ- ರಕ್ತರ ಮನದಲ್ಲಿ ನಿಂದಿಹ ಚರಣ ಸೂ- ರಕ್ತಾರ್ಕನ ನಖದಿಂದಲಪ್ಪುವ ಚರಣ ಭಕ್ತಿಗೆ ಒಲಿದೊಲಿದು ಭಾಗ್ಯ ಕೊಡುವ ಚರಣ ಭಕ್ತವತ್ಸಲನೆಂಬ ಮಹಾ ಪ್ರತಾಪದ ಚರಣ ವ್ಯಕ್ತವಾಗಿ ಲೋಕಾ ಪೂರ್ಣವಾದಾದೀ ಚರಣ ಉಕ್ತಿಗೆ ಮೈದೋರದ ಉನ್ನತೋನ್ನತ ಚರಣ ಶಕ್ತಿ ಪ್ರದವಾದ ಜ್ಞಾನಾನಂದ ಚರಣ ತ್ಯಕ್ತ ವೈದಿಕಾ ಸಿದ್ಧ ಸಾರಸುಂದರ ಚರಣ ಭಕ್ತಿ ಭೂಷಣವಿತ್ತು ಪಾಲಿಸುವ ಚರಣ ಶಕ್ತಿ ಉದರದಲ್ಲಿ ಅಂಕಿತವಾದ ಚರಣ ಸಿಕ್ತೋದಕ ಧರಿಸೆ ಶಿರದಲ್ಲಿ ಹೊಳೆವ ಚರಣ ಮುಕ್ತಿ ಕೊಡುತಿಪ್ಪ ಮದನ ಲಾವಣ್ಯ ಚರಣ ನಕ್ತೇಶನಂದದಲಿ ಥಳಥಳಿಸುವ ಚರಣ ಮುಕ್ತಾಭರ…