Haridasa Sahitya — Vyasadasa
Venkatesha Mahatme Sulaadi 25 — Sri venkatesha prarthana sulaadhi
ಸುಳಾದಿ ೨೫ — ಶ್ರೀ ವೇಂಕಟೇಶ ಪ್ರಾರ್ಥನಾ ಸುಳಾದಿ
Composer: Vijaya Dasaru · Deity: Venkatesha · Genre: Sulaadi
Kannada lyrics
ಶ್ರೀ ವೇಂಕಟೇಶ ಪ್ರಾರ್ಥನಾ ಸುಳಾದಿ ರಾಗ ಕಾನಡ ಧ್ರುವತಾಳ ತನುವಾರೋಪಿಸಿದೆನೊ ಮನವಾರೋಪಿಸಿದೆನೊ ದಿನ ಪ್ರತಿದಿನ ಬಿಡದೆ ಮಾಳ್ವ ಲಾಭಾಲಾಭ ಗುಣವಾರೋಪಿಸಿದೆನೊ ಗಣನೆಯಿಲ್ಲದೆ ಎನ್ನ ಜನ್ಮ ಜನ್ಮಾದಲ್ಲಿ ನೆನೆದು ಮಾಡಿದವೆಲ್ಲ ನಿನಗೆ ತಪ್ಪದು ಕಾಣೊ ವನಜನಾಭನೆ ನಮಗೆ ಜನನಿ ಜನಕ ನೀನೆಂದೆನಿಸಿದ ತರುವಾಯ ಅನುಮಾನ ಯನಗೆ ಎಳ್ಳಿ ನಿತು ಹುಟ್ಟದು ಕಾಣೊ ಗುಣ ಅರ್ಗುಣನೆಂದು ಎಣಿಸಿ ದೂರವಿಟ್ಟಾರೊಳ್ಳಿತು ಘನವ ನಿನ್ನದು ಯಮನು ಮುನಿಯಾಮಿಕ್ಕಾದ ಮಾತಿಗೆ ಮಣ್ಣುವನೆ ವಜ್ರದ ಖಣಿ ಶಕ್ಕತ್ರನಾಗೆ ಕನಕಾದ್ರಿ ಸದನ ವೇಂಕಟ ವಿಜಯವಿಠ್ಠಲ ನಿನಗಲ್ಲದೆ ಅನ್ಯತರ ಜನಕೆ ಶರಣುಪೋಗ ॥ 1 ॥ ಮಟ್ಟತಾಳ ಬಂಟರ ಮನೋಹರ ಬಂಟರಿಗೆ ವೈ- ಕುಂಠಪತಿ ನೀನೆ ಬಂಟನಾ…