Haridasa Sahitya — Vyasadasa
Venkatesha Mahatme Sulaadi 24 — Sri venkateshana stotra prarthana sulaadhi
ಸುಳಾದಿ ೨೪ — ಶ್ರೀವೇಂಕಟೇಶನ ಸ್ತೋತ್ರ ಪ್ರಾರ್ಥನಾ ಸುಳಾದಿ
Composer: Vijaya Dasaru · Deity: Venkatesha · Genre: Sulaadi
Kannada lyrics
ಶ್ರೀವೇಂಕಟೇಶನ ಸ್ತೋತ್ರ ಪ್ರಾರ್ಥನಾ ಸುಳಾದಿ ರಾಗ ಕಾಂಬೋಧಿ ಧ್ರುವತಾಳ ಆದಿದೈವವ ನಿನ್ನ ಪಾದವ ನೆರೆನಂ- ಬಿದೆನು ಬಿಡದಲೆ ಆದರಿಸು ಕಾದುವ ಖಳರು ವಾಮದಲ್ಲಿ ಹುರಿಗೂಡಿ ಬಾಧೆಬಡಿಸುವುದು ನಾ ದಾರಿಗೆ ದೂರಲಿ ಪೋದನೇಕಜನನವಾದ ಕಾಲದಲ್ಲಿ ಈ ದೇಹದ ಸುಖವಾದದ್ದು ಕಾಣೆನೊ ವದರಸಿ ಕಾಣದ ಬಲು ಮಹಿಮಾನೆ ಯಾದವಶಿರೋಮಣಿ ವಿಜಯವಿಠ್ಠಲ ನಿನ್ನ ಮಾಧುರ್ಯನಾಮವ ಉಣ್ಣಿಸಿ ಬೀದಿಬಸವನ ಮಾಡು ॥ 1 ॥ ಮಟ್ಟತಾಳ ಅಪ್ಪನ ಅಪ್ಪನೆ ಗಿರಿಯ ತಿಮ್ಮಪ್ಪನೆ ಸರ್ಪನ ತಲ್ಪನೆ ಸರ್ವರೊಳಿಪ್ಪನೆ ಇಪ್ಪಲು ತಪ್ಪನೆ ಕರೆದರೆ ಬಪ್ಪನೆ ದರ್ಪಣರೂಪನೆ ವಿಜಯವಿಠ್ಠಲ ನಿನ್ನ ಕಪ್ಪಿನ ಚರಣದಲ್ಲಿ ಧೊಪ್ಪನೆ ಹೊರಹೊರಳುವನೊ ॥ 2 ॥ ತ್ರಿವಿಡಿತಾಳ ಕಟಕನ ಕೈಯ ಶಿಲುಕಿದ ಗೋವ…