Haridasa Sahitya — Vyasadasa
Venkatesha Mahatme Sulaadi 23 — Sri venkatesha aparoksha sulaadhi
ಸುಳಾದಿ ೨೩ — ಶ್ರೀವೇಂಕಟೇಶ ಅಪರೋಕ್ಷ ಸುಳಾದಿ
Composer: Vijaya Dasaru · Deity: Venkatesha · Genre: Sulaadi
Kannada lyrics
ಶ್ರೀವೇಂಕಟೇಶ ಅಪರೋಕ್ಷ ಸುಳಾದಿ ರಾಗ ಭೈರವಿ ಧ್ರುವತಾಳ ಅಂತರಂಗದೊಳು ಹೊಳೆವವನು ಶ್ರೀ- ಕಾಂತನೊ ಬೊಮ್ಮನ ಪಡೆದ ದೇವನೊ ಕಂತುಜನಕನೊ ಅನಂತ ನದಿಯ ಪಿತನೊ ಅಂತಕಾಂತಕನ ಪೆತ್ತಯ್ಯನೊ ಅಯ್ಯನೊ ಸಂತತ ಚಿಂತಿಪ ಭಕ್ತರ ಮನೋಹರನೊ ಅಂತಕನೊ ದೈತ್ಯ ಸಂತತಿಗೆ ದಂತಿಯ ಪಾಲಿಸಿದ ಪರಮಪವಿತ್ರನೊ ಕುಂತಿಯ ಮಕ್ಕಳಿಗೆ ಬಿಡದೆ ಬೆಂಬಲನೊ ದಂತವಕ್ತ್ರಾದಿಯ ಕೊಂದ ಬಲವಂತನೊ ಹೊಂತಕಾರನೊ ಜಗದಂತರ್ಯಾಮನೊ ತಂತುಗಾರನೊ ಶೃಂಗಾರವರನೊ ಪಂಥದ ದೈವವ ವಿಜಯವಿಠ್ಠಲರೇಯಾ ಎಂಥವರ ಭಾರ ಭ್ರಾಂತಿಗಳಿಸುವ ದಿಟ್ಟನೊ ॥ 1 ॥ ಮಟ್ಟತಾಳ ಶ್ರೀಶ ಈಶ ಶೇಷಭೂಷಾಧೀಶ ದಾಸ- ರಾಶಿ ಪಾಶ ಕ್ಲೇಶನಾಶ ದಾಸವೇಷ ದಾಶಧೀಶಾಕಾಶವಾಸ ಹೃಷೀಕೇಶ ವಿಜಯವಿಠ್ಠಲ ಶೇಷಪೋಷ ಲೇಶವೆನಿಸ ॥ 2 ॥…