Haridasa Sahitya — Vyasadasa

Venkatesha Mahatme Sulaadi 22 — Tiruvengalishana sulaadhi

ಸುಳಾದಿ ೨೨ — ತಿರುವೇಂಗಳೇಶನ ಸುಳಾದಿ

Composer: Vijaya Dasaru · Deity: Venkatesha · Genre: Sulaadi

Kannada lyrics

ತಿರುವೇಂಗಳೇಶನ ಸುಳಾದಿ ರಾಗ ಪೂರ್ವಿ ಕಲ್ಯಾಣಿ ಝಂಪೆತಾಳ ಕೆಂದಳವ ಸೋಲಿಸುವ ನಖಗಳಾನಂತ ಇಂದು ಕಾಂತಿಗಳುಳ್ಳ ಪಾದವನು ಕಂಡೆನಾ ನಂದುಳಿ ಧ್ವಜ ವಜ್ರಾಂಕುಶ ಮಂಗಳ ಸುಧಾರ- ವಿಂದ ಕುಂಕುಮ ರೇಖೆಯುಳ್ಳ ಪದತಳವ ಕಂಡೆ ಒಂದೊಂದು ಬೆರಳುಗಳಲ್ಲಿ ಎಸೆಯುವ ಪಂಕ್ತಿ ಬೆರಳುಗಳಾಧಾರ ಸಂಧಿಯಲ್ಲಿ ಒಪ್ಪುವ ಜಗವ ಚಿತ್ರವ ಕಂಡೆ ಅಂದಿಗೆ ಕ್ಷೀರಿಗೆಜ್ಜೆ ಕಾಲುಗಗ್ಗರಿಪೆಂಡೆ ಮುಂದೊಲಿವ ಮುಂಜರಗು ತಡರ ಬಿರುದನ ಕಂಡೆ ಛಂದವಾದ ಜಾನು ಜಂಘೆ ಕದಳಿಯ ಮಾಟ- ದಂದಲಿ ಒಪ್ಪುವ ದ್ವಯ ಉರವನು ಕಂಡೆ ನಾ ಮಂದಗಮನಿಯರ ಬಲು ಸೋಲಿಸುವ ಸಂಪಿನಲ್ಲಿ ಒಂದೊಂದು ಬೆರಗಿನ ಸ್ಮರಮಣನ ಕಂಡೆ ನಾ ಮುಂದೆ ಪೀತಾಂಬರ ಹೊಳೆವ ಒಡ್ಡ್ಯಾಣ ಕರ ಒಂದು ಕರ ಮತ್ತೊಂದು ಕಟಿಯ ಹಸ್ತವ…

Transliteration

tiruvenggaleshana sulaadi raaga poorvi kalyaani jhampetaala kendalava solisuva nakhagalaananta indu kaantigalulla paadavanu kandenaa nanduli dhvaja vajraangkusha manggala sudhaara- vinda kungkuma rekheyulla padatalava kande ondondu beralugalalli eseyuva pangkti beralugalaadhaara sandhiyalli oppuva jagava chitrava kande andige kshiirigejje kaalugaggaripende mundoliva munjaragu tadara birudana kande…