Haridasa Sahitya — Vyasadasa
Venkatesha Mahatme Sulaadi 18 — Sri tiruvengalisha sulaadhi
ಸುಳಾದಿ ೧೮ — ಶ್ರೀ ತಿರುವೇಂಗಳೇಶ ಸುಳಾದಿ
Composer: Vijaya Dasaru · Deity: Venkatesha · Genre: Sulaadi
Kannada lyrics
ಶ್ರೀ ತಿರುವೇಂಗಳೇಶ ಸುಳಾದಿ ರಾಗ ಶಂಕರಾಭರಣ ಝಂಪೆತಾಳ ತರಣಿ ಶತಕೋಟಿ ರುಚಿಗಧಿಕವೆಂದೆನಿಸುವ ತಿರುಪತಿವಾಸನ ವರಕಿರೀಟವ ಕಂಡೆ ಶಿರದಲ್ಲಿ ಮುಡಿದಿದ್ದ ಪರಿಪರಿಯ ಕುಸುಮಗಳು ಅರಳಿ ಪರಿಮಳಿಸುತ್ತ ಹರಿಯುತಿವೆ ದೆಸೆದೆಸೆಗೆ ಹರಿಣ ಕರುಹನ ತ್ರಯದಿ ನೊಸಲ ಕಸ್ತೂರಿ ತಿಲಕ ಸರಸಿಜದಳವ ಧಿಕ್ಕರಿಸುವ ನಯನವ ಕಂಡೆ ಸ್ಮರನ ಕರದಿಂದ ನಾಯ ರ್ರಿಸಿದ ಚಾಪವನೆ ಎರಡು ಪೆಬ್ಬುಬ್ಬುಗಳು ತಿರುಹುತ್ತಿಪ್ಪದ ಕಂಡೆ ಭರದಿಂದ ತೂಗುವತಿ ಮಕರ ಕುಂಡಲ ಕಾಂತಿ ಮಿರುಗುತ್ತಿರೆ ಗಲ್ಲದಲ್ಲಿ ಸರಳ ನಾಸಿಕ ಕಂಡೆ ಎರಡುಸಾಲ್ ಪಂಕ್ತಿ ದಂತಗಳೆಸೆಯೆ ಕರ್ಪೂರ ಕರಡಿಗೆ ಯಂದದಲಿ ವದನ ಎಳೆನಗೆ ಕಂಡೆ ಗಿರಿಯ ತಿರುಮಲ ಸಿಂಧು ವಿಜಯವಿಠ್ಠಲನು ಸುರಿದಧಾರಾಮೃತ ಕಂಡೆ ಉತ್ಸ…