Haridasa Sahitya — Vyasadasa

Venkatesha Mahatme Sulaadi 17 — Tiruvengalisha sulaadhi

ಸುಳಾದಿ ೧೭ — ತಿರುವೇಂಗಳೇಶ ಸುಳಾದಿ

Composer: Vijaya Dasaru · Deity: Venkatesha · Genre: Sulaadi

Kannada lyrics

ತಿರುವೇಂಗಳೇಶ ಸುಳಾದಿ ರಾಗ ಸಾರಂಗ ಧ್ರುವತಾಳ ಈತನಾತ್ಮ ಮೂರ್ತಿ ಈತನಂತರಾತ್ಮಾ ಈತನೆ ಪರಮಾತ್ಮಾ ಈತನೆ ಜ್ಞಾನಾತ್ಮಾ ಈತನೆ ಅನ್ಯಾದಿ ಮೂರ್ತಿ ಈತನೆ ಪ್ರಾಜ್ಞಾದಿ ಮೂರ್ತಿ ಕಾಣೊ ಈತನೆ ಅಂಗುಷ್ಠ ಪರಿಮಿತ ಮೊದಲಾದ ಈತನೆ ಹೃದಯಾಂಬುಜ ನಿವಾಸ ಪ್ರ- ಖ್ಯಾತ ಮೂರ್ತಿ ಜಗದಾಶ್ಚರ್ಯ ಮೂರ್ತಿ ಈ ತಿರುವೇಂಗಳ ತಿಮ್ಮಪ್ಪ ಎನ್ನಪ್ಪ ವಾತವಂದಿತ ಸಿರಿ ವಿಜಯವಿಠ್ಠಲ ಪರಮಾ ಪ್ರೀತನು ಸಕಲಸುರ ವ್ರಾತಕನುದಿನ ॥ 1 ॥ ಮಟ್ಟತಾಳ ಹರಣದೊಳಗೆ ನೀನು ಇರಳು ಹಗಲು ಬಿಡದೆ ತರುಣಿ ಪುರುಷವೇಷ ಧರಿಸಿದೆ ಪ್ರತಿದಿನ ಮೆರೆದು ಉನ್ನತದಲ್ಲಿ ಸುರರೊಳು ಪೆಸರಾದ ವರಗಿರಿಯ ವಾಸ ತಿರುವೇಂಗಳೇಶ ವಿಜಯವಿಠ್ಠಲಧೀಶಾ ಕರುಣಾಕರ ಸುಜನರ ಮನೋರಥ ದೇವಾ ॥ 2 ॥ ತ್ರಿವಿಡಿ…