Haridasa Sahitya — Vyasadasa
Venkatesha Mahatme Sulaadi 16 — Sri venkatesha stotra sulaadhi
ಸುಳಾದಿ ೧೬ — ಶ್ರೀ ವೇಂಕಟೇಶ ಸ್ತೋತ್ರ ಸುಳಾದಿ
Composer: Vijaya Dasaru · Deity: Venkatesha · Genre: Sulaadi
Kannada lyrics
ಶ್ರೀ ವೇಂಕಟೇಶ ಸ್ತೋತ್ರ ಸುಳಾದಿ ರಾಗ ಆರಭಿ ಝಂಪೆತಾಳ ಎಸವ ಪೊಸರತ್ನ ರಂಜಿಸುವ ಮಕುಟಮೌಳಿ ಅಸಿತ ಸುಳಿಗುರುಳ ಶೋಭಿಸುತ್ತಿರೆ ಮಧುಪನಂತೆ ನೊಸಲಲ್ಲಿ ಮೃಗನಾಭಿ ತಿಲಕ ತಿದ್ದಿದ ಸೊಬಗು ದಶಕಂಠಕಾಂತಿ ಧಿಕ್ಕರಿಸುವ ಕುಂಡಲ ಛವಿ ಯಸಳು ಕಂಗಳು ಕುಸುಮಚಂಪಕನಾಸನ ಕಂಡೆ ಶಶಿವದನ ನಸುನಗೆ ರಸಸುರಿವ ಮಾತು ಮಿಸುಣಿಪ ವಳಿತ ಕಂಬುಕಂಧರ ರೇಖೆ ಹಸನಾದ ಉರನಾಭಿ ನಡಿವ ಸರ್ವಲೋಕ ಬಸುರೊಳಗೆ ಒಪ್ಪುತ್ತಿರೆ ಕಂಡೆ ಕಟಿಕರ ಯುಗ್ಮ ಪಸರಿಸುವ ಊರು ಜಾನುಜಂಘೆ ಪದನಖಾ ನಿಶಾಚರನಾಶಾ ಲೋಕತ್ರಯಾಶ್ರಯ ನಾಮಾ ಝಷಕೇತನಯ್ಯ ಸಿರಿ ವಿಜಯವಿಠ್ಠಲನ ಅಸಮಸ ಮೂರ್ತಿಯ ಕನಸಿನಲ್ಲಿ ಕಂಡೆ ॥ 1 ॥ ಮಟ್ಟತಾಳ ವೀರ ಮುದ್ರಿಕೆ ಬೆರಳ ಚಾರು ಶೋಭಿತ ಪೆಂಡೆ ಭೀರಗರುವ ಗೆಜ್ಜ…