Haridasa Sahitya — Vyasadasa
Venkatesha Mahatme Sulaadi 15 — Sri venkateshana mahime sulaadhi
ಸುಳಾದಿ ೧೫ — ಶ್ರೀವೇಂಕಟೇಶನ ಮಹಿಮೆ ಸುಳಾದಿ
Composer: Vijaya Dasaru · Deity: Venkatesha · Genre: Sulaadi
Kannada lyrics
ಶ್ರೀವೇಂಕಟೇಶನ ಮಹಿಮೆ ಸುಳಾದಿ ರಾಗ ಮಲಯಮಾರುತ ಧ್ರುವತಾಳ ಮುಪ್ಪು ಇಲ್ಲದ ಅಪ್ಪ ತಿರುಪತಿ ತಿಮ್ಮಪ್ಪ ಮುಪ್ಪು ಇಲ್ಲದ ತಾಯಿ ಅಲಮೇಲು ಮಂಗಾಯಿ ಮುಪ್ಪು ಇಲ್ಲದ ಗುರು ಶ್ರೀಮದಾಚಾರ್ಯರು ಮುಪ್ಪು ಇಲ್ಲದ ಬಾಂಧವರು ಹರಿಭಕ್ತರು ಮುಪ್ಪು ಇಲ್ಲದ ಧನ ಹರಿನಾಮ ಸಾಧನ ಮುಪ್ಪು ಇಲ್ಲದ ಸದನ ದಿವ್ಯಾನಂತಾಸನ ಮುಪ್ಪೆ ಮುಪ್ಪೆ ಇಲ್ಲ ಎಮ್ಮ ಸೌಭಾಗ್ಯಕ್ಕೆ ಮುಪ್ಪುರದೊಳಗೆ ಹರಿದಾಸರಿಗೆ ಎಣೆಯೆ ಮುಪ್ಪುರವ ಗೆಲಿದ ಅನಘ ವಿಜಯವಿಠ್ಠಲರೇಯ ಅಪ್ಪಾ ಭಕ್ತರ ಒಡನಾಡುವುದು ತಪ್ಪಾ ॥ 1 ॥ ಮಟ್ಟತಾಳ ಉಡಲು ಉಣಲುಂಟು ಕಡಲು ಕಣಲುಂಟು ಅಡಗಾಣಿಪ ಭವಕಡಲಾಯಾಸವನ್ನು ಬಿಡದೆ ದಾಟಲಿವುಂಟು ಸಡಗರದಲ್ಲಿದ್ದ- ಟ್ಟುಡಿ ಹರಿನಾಮವ ಹಡಗವೆಂಬುದು ಕೈ- ವಿಡಿದು ಸುಖವ…