Haridasa Sahitya — Vyasadasa
Venkatesha Mahatme Sulaadi 14 — Sri venkateshana mahima sulaadhi
ಸುಳಾದಿ ೧೪ — ಶ್ರೀವೇಂಕಟೇಶನ ಮಹಿಮಾ ಸುಳಾದಿ
Composer: Vijaya Dasaru · Deity: Venkatesha · Genre: Sulaadi
Kannada lyrics
ಶ್ರೀವೇಂಕಟೇಶನ ಮಹಿಮಾ ಸುಳಾದಿ ರಾಗ ಪಂತುವರಾಳಿ ಧ್ರುವತಾಳ ಸಮ್ಮುಖನಾಗು ಗಿರಿಯ ತಿಮ್ಮ ನಾತುಮೆ ಪುರುಷೋ- ತ್ತಮ ಆ ಮಹಾಮಹಿಮಾ ರಮೆಯರಸ ಸರ್ವೋ- ತ್ತಮ ಅಂತರಾತ್ಮ ಬ್ರಹ್ಮಜನಕ ಪರಮಾ- ತ್ಮ ರೇವತಿರಮಣ ತಮ್ಮ ದೇವೋ- ತ್ತಮ ಜ್ಞಾನಾತ್ಮ ವೈಷಮ್ಯವಿಲ್ಲದ ಪರ- ಬ್ರಹ್ಮ ರಮ್ಯನುತಾ ಅನುಪಮ ಚರಿತಾನಮಿತ ಸಂಬಂಧ ಸರ್ವದಾಗಮ್ಯ ಹಮ್ಮಿನ ದೈವ ಖಮ್ಮೆಯೊಳಗೆ ಅಹಂಮತಿಯವ ನಾನೆ ದಮ್ಮಯ್ಯ ಇಮ್ಮಯ್ಯ ಲಾಲಿಪು ನಮ್ಮಯ್ಯ ನಿಮ್ಮವನಾಗಿ ನಿನಗೆ ನಮ್ಮ ನಮಃ ಎಂಬೆ ಹಮ್ಮು ಭಕ್ತರ ಕೂಡ ಸಂಬಂಧವರಲಿ ವೊ ಹೆಮ್ಮೆಯಿಂದಲಿ ನಿನ್ನ ನೆಮ್ಮಿದೆ ನೇಮದಲಿ ಅಮ್ಮಲಾವನಮಾಲಾ ವಿಜಯವಿಠ್ಠಲ ಎನ್ನ ಮಮ್ಮುಳಿಕೆ ಹರಿಸು ಅಮೃತಾ ದಾರಿ ತೋರೂ ॥ 1 ॥ ಮಟ್ಟತಾಳ ಪಂಚನಾಡಿಯೊಳಿ…