Haridasa Sahitya — Vyasadasa

Venkatesha Mahatme Sulaadi 13 — Sri venkatesha stotra sulaadhi

ಸುಳಾದಿ ೧೩ — ಶ್ರೀ ವೇಂಕಟೇಶ ಸ್ತೋತ್ರ ಸುಳಾದಿ

Composer: Vijaya Dasaru · Deity: Venkatesha · Genre: Sulaadi

Kannada lyrics

ಶ್ರೀ ವೇಂಕಟೇಶ ಸ್ತೋತ್ರ ಸುಳಾದಿ ರಾಗ ನಾಟಿ ಧ್ರುವತಾಳ ವೇಂಕಟೇಶನೆ ಚಕ್ರ ಶಂಖ ಕೌಮೋದಕಿ ಪಂಕಜೇಕ್ಷತನೊ ಮೀನಾಂಕನ ಪಿತನೆ ಭ- ಯಂಕರ ದೈತ್ಯರ ಬಿಂಕವತರಿಸಿದಕ- ಳಂಕ ಮಹಿಮ ನಿಶ್ಶಂಕ ಪುಣ್ಯನಾಮ ಪಂಕಜಭವನಾಗ ಕಂಕಣನುತ ಪಾದ ಪಂಕಜ ಶ್ರೀವತ್ಸಾಂಕಿತ ಫಣಿ ಪ- ರ್ಯಂಕನೇ ಲಂಕೇಶ ಪೋಷ ವೇಂಕಟದೀಶಾ ಸಂಕಟಹರ ಸುರಲಂಕೃತ ಮನೋಹರ ಟಂಕನೆ ನಾಮದೇವಾ ವಿಜಯವಿಠ್ಠಲ ಎನು ಸೋಂಕ ಸಂಸಾರದ ಶೃಂಖಲ ಪರಿಹರಿಸೊ ॥ 1 ॥ ಮಟ್ಟತಾಳ ನಿರಾಧಾರ ನಿಸ್ಸಂಗ ನಿರ್ಮಲಾಂಗ ನಿರಾಮಯ ನಿರ್ದೋಷ ನೀರದಭಾಸ ನಿರಂಜನ ನಿರ್ಗುಣ ನಿರಾವರಣ ನೀರಜರಮಣ ನಿರಾಶ್ರಯನೆ ನಿರ್ವಿಕಲ್ಪ ನಿರ್ವಿಕಾರ ವಿಜಯವಿಠ್ಠಲ ತಿರುವೇಂಗಳೇಶ ತಿರುಪತಿವಾಸ ॥ 2 ॥ ತ್ರಿವಿಡಿತಾಳ ಮಂಗಳ ಮಹಿಮ ತಿರು…