Haridasa Sahitya — Vyasadasa

Venkatesha Mahatme Sulaadi 11 — Sri venkatesha parvata mahatme sulaadhi

ಸುಳಾದಿ ೧೧ — ಶ್ರೀ ವೇಂಕಟೇಶ ಪರ್ವತದ ಮಹಾತ್ಮೆ ಸುಳಾದಿ

Composer: Vijaya Dasaru · Deity: Venkatesha · Genre: Sulaadi

Kannada lyrics

ಶ್ರೀ ವೇಂಕಟೇಶ ಪರ್ವತದ ಮಹಾತ್ಮೆ ಸುಳಾದಿ ರಾಗ ಕಲ್ಯಾಣಿ ಧ್ರುವತಾಳ ಕಾಯದಿಂದಲಿ ಭಕ್ತಿ ಮಾಡಿದಪರಾಧ ತಾಯಿಯಂದದಿ ತಾನೆ ಕಾರುಣ್ಯದಿಂ ಗಾಯವಾಗದಂತೆ ದಂಡಿಸಿ ಪಾಲಿಸುವ ಶ್ರೀಯರಸನ ಗುಣಕೆ ಏನೆಂಬೆನೊ ಸ್ತ್ರೀ ಯೋಗ ಮೊದಲಾದ ಪಾಪಗಳು ಮಾಡಿರೆ ಕಾಯಿದುಕೊಂಬುವನಯ್ಯ ವಾಸನಮಯದಿಂ ಆಯಿತೆಂದೆನಿಸುವ ಸ್ವಾನುಭವದಿಂದ ನೋಯಾದಂತೆ ಪಾಪ ತೀರಿಸುವನು ಈಯವನಿಯೊಳಗೆ ಎಣಿಸಿದರು ಇಂಥ ಉ- ಪಾಯ ಬಲ್ಲೆಂಥ ದೈವ ಒಂದಿಲ್ಲ ಬಾಯಲ್ಲಿ ಆಡಿದರು ಕೋಪದಿಂದಲಿ ಅವನ ಸಾಯಬಡುವರಲಿ ಮುಂದೋರದೆ ಕಾಮಜ ಪಿತನ ಮಹಿಮೆ ಕೇಳಿರೊ ತನ್ನುವರು ಕಾಯದಲ್ಲಿ ಪಾಪಮಾಡೆ ಮನದಲ್ಲಿ ಉಣ್ಣಿಪ ಛಾಯೆಯಂತೆ ಪುಣ್ಯ ಮನದಿಂದ ಮಾಡಿದರೆ ಕಾಯದಲಿ ಉಣ್ಣಿಸುವ ಖ್ಯಾತಿ ಇತ್ತು ಮಾಯಾಕಾರನ ಮ…