Haridasa Sahitya — Vyasadasa

Venkatesha Mahatme Sulaadi 10 — Sri venkatesha sulaadhi

ಸುಳಾದಿ ೧ — ಶ್ರೀ ವೇಂಕಟೇಶ ಸುಳಾದಿ

Composer: Vijaya Dasaru · Deity: Venkatesha · Genre: Sulaadi

Kannada lyrics

ಶ್ರೀ ವೇಂಕಟೇಶ ಸುಳಾದಿ ರಾಗ ನಾದನಾಮಕ್ರಿಯಾ ಧ್ರುವತಾಳ ವಸುದೇವ ಅತ್ರಿ ಸುತಪ ಜಮದಗ್ನಿ ವಿಶಾಲ ದಶರಥ ಪರಾಶರ ಕರ್ದಮ ಶುಭಾ ವಿಶಜ ಕರ್ದಮನಾರಿ ಯಮಧರ್ಮ ರುಚಿ ವಿಷ್ಣುಯಶ ಪ್ರಿಯವ್ರತ ಬ್ರಹ್ಮ ದೇವ ಗುಂಹಾಯ ಋಷು ನಂಬೀ ದೋಷ ವೇದ ಶಿರ ಆಯುಷೆ ಅಯ್ಯಕ ಬೆಸಸುವ ಇವರ ತರುವಾಯದಲ್ಲಿ ಮತ್ತೆ ಪ್ರಸನ್ನ ದೇವಕಿ ಸತ್ಯವತಿ ರೇಣುಕಾ ಕೌಸಲ್ಯಾ ವಿಶ್ವೇಚಿ ವಿಕುಂಠ ಅವಿತಿ ಆಕೂತಿ ಅನಸೂಯಾ ತುಷ್ಟಿ ಶ್ರಾವ್ಯಾದಿ ಮೇರು ಸಂಭೂತಿ ಸರಸ್ವತಿ ಮಿಸುಣಿಪ ದೇವಹೂತಿ ಅಂಬುಧರ ವೈಧೃತಿ ಕಶಲ ಸುಕೃತ ಬೃಹತಿ ವೀತಾದ್ಯರು ವಸುಧೆಯೊಳಗೆ ಏಸು ಪುಣ್ಯ ಮಾಡಿದರೊ ಎಣಿಸಲಾರರು ಮಹಾಜ್ಞಾನಿಗಳೂ ಅಸಮ ದೈವವ ನಿನ್ನ ವೊಲಿಸಿಕೊಂಡು ಬಿಡದೆ ಶಿಶುವು ಮಾಡಿಕೊಂಡು ಆಡಿಸುತ…