Haridasa Sahitya — Vyasadasa

Venkatesha Mahatme Sulaadi 8 — Sri venkateshana yatre sulaadhi

ಸುಳಾದಿ ೮ — ಶ್ರೀ ವೇಂಕಟೇಶನ ಯಾತ್ರೆ ಸುಳಾದಿ

Composer: Vijaya Dasaru · Deity: Venkatesha · Genre: Sulaadi

Kannada lyrics

ಶ್ರೀ ವೇಂಕಟೇಶನ ಯಾತ್ರೆ ಸುಳಾದಿ ರಾಗ ಸಿಂಧುಭೈರವಿ ಧ್ರುವತಾಳ ವೇಂಕಟೇಶನ ಯಾತ್ರೆ ಎಂಥದೊ ವರ್ಣಿಸಲು ಮಂಕ ಜನರಿಗೆ ದೊರೆಯಾದಿದು ಪಂಕಜೋದ್ಭವ ಮೃಗಾಂಕಧಾರಾದಿಗಳು ಕಿಂಕರರಾಗಿ ಕೊಂಡಾಡುವರು ಡೊಂಕ ಮಾನವ ಗದೆ ಭುಜದಲ್ಲಿ ತಪ್ತ ಮು- ದ್ರಾಂಕಿತ ಧರಿಸಿದ ಮನುಜ ಬಂದು ಓಂಕಾರ ಪೂರ್ವಕದಿಂದ ಸ್ಮರಿಸೆ ಭವದ ಸಂಕೋಲೆ ಕಡಿಯುವುದು ಒಮ್ಮೆ ಸಾರಿ ಸಂಕಟವಿಲ್ಲದ ಲೋಕದಲ್ಲಿ ಸರ್ವಾ- ಲಂಕಾರಧರರಾಗಿ ಸುಖಿಸುವರೊ ಶಂಕಿಸೆ ಇದರಲಿ ಅಪವಾದ ನುಡಿದರೆ ಶಂಕ ತಲೆಯ ಮೇಲೆ ಹೊಡೆವ ಯಮನು ಅಂಕುಶವೊ ಮಹಾ ದುರಿತವೆಂಬ ಕರಿಗೆ ಪಂಕಜನಾಭನ ದಾಸರಿಗೆ ನಿತ್ಯ ಶಂಕರ ಭರಣಾಶಾಯಿ ವಿಜಯವಿಠ್ಠಲ ಬಿರಿ- ದಂಕನ ಧ್ಯಾನ ನಿಲ್ಲಿಸಿದವರಿಗೆ ॥ 1 ॥ ಮಟ್ಟತಾಳ ಕನಕಗಿರಿ ದರ…