Haridasa Sahitya — Vyasadasa
Venkatesha Mahatme Sulaadi 7 — Sri venkatagiri mahima sulaadhi
ಸುಳಾದಿ ೭ — ಶ್ರೀ ವೇಂಕಟಗಿರಿ ಮಹಿಮಾ ಸುಳಾದಿ
Composer: Vijaya Dasaru · Deity: Venkatesha · Genre: Sulaadi
Kannada lyrics
ಶ್ರೀ ವೇಂಕಟಗಿರಿ ಮಹಿಮಾ ಸುಳಾದಿ ರಾಗ ತೋಡಿ ಧ್ರುವತಾಳ ಮಿರುಗುವ ಉರಗಗಿರಿಯ ಶಿಖರವನ್ನು ಕಂಡೆ ನಾ ಪರಮ ಧನ್ಯನಾದೆ ಗುರುಗಳ ಕರುಣದಿಂದ ಧರಣಿಯೊಳಗಿದಕೆಲ್ಲಿ ಸರಿಗಾಣೆ ನಾನಾ ಬಗೆ ಅರಿಸಿದರು ಸರ್ವಶ್ರುತಿಗಳಲ್ಲಿ ತಿಳಿದು ಅರರೆ ಮತ್ತಾರ್ನೊ ಈ ಯಾತ್ರೆಯ ಪುಣ್ಯ ಬರೆದು ಕಡೆಗಂಡು ಗುಣಿಸೆಣಿಸುವನಾರು ತಿರುವೇಂಗಳಪ್ಪ ನಿಪ್ಪ ಕ್ಷೇತ್ರದ ಮಹಿಮೆಯನ್ನು ಇರಳು ಹಗಲು ವರ್ಣಿಸಲು ಸವೆಯದು ಸುರರು ಮೊದಲಾದವರು ರೂಪಾಂತರವ ತಾಳಿ ಹರುಷ ಪಡುವರು ನೋಡಿ ಜ್ಞಾನಿಗಳು ತರುಲತಾ ಖಗಮೃಗ ಜಲಚರಾದಿಗಳಾಗಿ ಚರಿಸುತ್ತಿಪ್ಪರು ಸಾಧನವ ಮಾಡುತ್ತ ದುರುಳ ಜನಕೆ ಇಲ್ಲಿ ಅನಂತ ಜನ್ಮಕ್ಕೆ ಕರಣ ಶುದ್ಧ ಭಕ್ತಿಯು ಹುಟ್ಟದಯ್ಯಾ ಮರಳಿ ದೊರೆತರೆ ಲೋಹದ ಮೇಲೆ ಹಮ…