Haridasa Sahitya — Vyasadasa

Venkatesha Mahatme Sulaadi 6 — Tirupati sulaadhi

ಸುಳಾದಿ ೬ — ತಿರುಪತಿ ಸುಳಾದಿ

Composer: Vijaya Dasaru · Deity: Venkatesha · Genre: Sulaadi

Kannada lyrics

ತಿರುಪತಿ ಸುಳಾದಿ ರಾಗ ಸಿಂಹೇಂದ್ರಮಧ್ಯಮ ಧ್ರುವತಾಳ ವಲಯಾಕಾರಾದಿಯ ಸುತ್ತ ಒಪ್ಪುತ್ತಿರಲು ಎತ್ತ ತಿಳಿದರೆ ಸ್ಥಾನ ರತ್ನಮಯವಾಗಿದೆ ಪೊಳೆಯುವ ಚತುರ ಬೀದಿ ಜ್ಞಾನ ಭಕ್ತಿ ವೈರಾಗ್ಯ ಸಲ್ಲೆ ಧರ್ಮ ಪೆಸರಿನಲಿ ಕರೆಸುತ್ತಿರ್ಕ ಥಳಥಳಿಸುವ ಉನ್ನತ ಪ್ರಾಕಾರ ಗೋಪುರ ಸುಲಭದಲ್ಲಿಯಾಯ ಕೊಂಡಾಡುವ ಜನಕೆ ಶಿಲೆ ಎನ್ನದಿರಿ ಎಲ್ಲಿ ಮಣಿಮಯದಿಂದ ವ- ಗ್ಗಳವಾಗಿ ಬಿಗಿದ ಸೊಬಗು ನೋಡಿರೊ ತಳಿಗೆ ತೋರಣ ಕಟ್ಟಿ ಪರಮ ಮಂಗಳವಾಗಿ ಸುಳಿದಿದೆ ಬಲುಕಾಂತಿ ಗಗನ ಮುಟ್ಟಿ ಚೆಲುವ ಮಹಾದ್ವಾರ ಪರಿಪರಿ ಮಾಟದ ಬಾ- ಗಿಲು ಅಲ್ಲಿ ಕುಳಿತಿದ್ದ ದ್ವಾರದವರು ಒಳಗೆ ಗರುಡಗಂಭ ಮತ್ತೆ ಪ್ರಾಕಾರ ಮಧ್ಯ ಪೊಳಲು ಭೋಗ ಮಂಟಪ ಸುತ್ತ ಪೌಳಿ ಕಳಸದಿಂದೊಪ್ಪುವ ವೈಚಿತ್ರವಾದಾನಂ…