Haridasa Sahitya — Vyasadasa

Venkatesha Mahatme Sulaadi 5 — Venkatagiri sulaadhi

ಸುಳಾದಿ ೫ — ವೇಂಕಟಗಿರಿ ಸುಳಾದಿ

Composer: Vijaya Dasaru · Deity: Venkatesha · Genre: Sulaadi

Kannada lyrics

ವೇಂಕಟಗಿರಿ ಸುಳಾದಿ ರಾಗ ಸಾವೇರಿ ಧ್ರುವತಾಳ ಗಿರಿಯ ಶಿಖರವ ಕಂಡೆ ಅರುಣ ಸೂರ್ಯಮಯ ಮಿರುಗುತ್ತಿದೆ ಚತುರ್ದಶ ಧರೆಯೊಳಗೆ ಮೆರೆಯುತ್ತಿದೆ ಎರಗುತ್ತಿದೆ ಮನವಿರದೆ ಕರಗುತ್ತಲಿದೆ ದುರಿತಪಾಶ ಪರಿಯುತ್ತಿದೆ ಪಿಯೂಷ ಸುರಿಯುತ್ತಿದೆ ಅನುಗಾಲ ವರಕಲಿಕಲಿಕೆಗೆ ಅರಿಸಿ ನೋಡಿದರು ಈ ಗಿರಿಗೆ ಸಮಾನೆಂದುರು ಕಾಣೆ ನಾನಾಅಲ್ಲಿ ಪರಿಪರಿಯ ತ್ರಯದಿ ಶೃಂಗಾರಾಲಂಕಾರ ಸುಂ- ದರ ಲಕ್ಷಣಗಳಿಂದ ಸರಸದಲಿ ಒಪ್ಪುತ್ತಿದೆ ವರಗಿರಿಯ ತಿಮ್ಮ ತಿರುಮಲ ತಿರುವೇಂಗಳ ಉರಗಗಿರಿಯವಾಸ ವಿಜಯವಿಠ್ಠಲರೇಯ ನಿರುತ ಉತ್ಸಾಹದಲಿ ಸುರರೊಡೆಯನಿಪ್ಪ ॥ 1 ॥ ಮಟ್ಟತಾಳ ಧರೆಗಿದು ವೈಕುಂಠಪುರವಿದು ನಿಜವೆಂದು ಸುರರು ಕಿನ್ನರರು ಸಿದ್ಧರು ಗರುಡರು ಸಾ- ಧ್ಯರು ಗಂಧರ್ವರು ಉರಗ…