Haridasa Sahitya — Vyasadasa

Venkatesha Mahatme Sulaadi 4 — Sri venkatagiri mahatme sulaadhi

ಸುಳಾದಿ ೪ — ಶ್ರೀ ವೇಂಕಟಗಿರಿ ಮಹಾತ್ಮೆ ಸುಳಾದಿ

Composer: Vijaya Dasaru · Deity: Venkatesha · Genre: Sulaadi

Kannada lyrics

ಶ್ರೀ ವೇಂಕಟಗಿರಿ ಮಹಾತ್ಮೆ ಸುಳಾದಿ ರಾಗ ಮುಖಾರಿ ಧ್ರುವತಾಳ ಪುಷ್ಕರಾದ್ರಿಯ ನೋಡಿ ಪುಣ್ಯವಂತರ ಕೂಡಿ ದುಷ್ಕರ್ಮಗಳ ಅಳಿದು ದುರ್ಜನ ಸಂಗ ಹಳಿದು ನಿಷ್ಕಾಮ ವ್ರತವುಂಟು ನಿತ್ಯಮುಕ್ತಿಗೆ ಗಂಟು ದುಷ್ಕಲಾ ನಿಮಗಿಲ್ಲ ದುರ್ಲಭವೆನಿಸೊಲ್ಲ ನಿಷ್ಕಂಟಕರಾಗಿ ನಿರಯ ಗೆದ್ದು ಚನ್ನಾಗಿ ಪುಷ್ಕರವಿಡಿದು ಸತ್ಗುಣಾಯರ ಕ್ರಮ ತಿಳಿದು ಪುಷ್ಕರಾದಿ ಕ್ಷೇತ್ರ ಎಂಟರೊಳಗೆ ಇದು ಪುಷ್ಕರಾಜಿಪಾತ ನಂತೆ ಧರೆಯೊಳು ಒಪ್ಪುತ್ತಿದೆ ಪುಷ್ಕರಾದಿ ದ್ವೀಪ ತಿರುಗಿದ ಫಲವು ನ- ಮಸ್ಕಾರ ಒಂದೇ ಪ್ರದಕ್ಷಿಣೆಯಿಂದ ಯೀಂದೀರ್ದು ಪುಷ್ಕರಾಕ್ಷಾತ್ಮಾ ವಿಜಯವಿಠ್ಠಲ ಕೊಡ್ತಿ ಪುಷ್ಕರ ನಿಯಮತಿ ಪುಷ್ಕಳವಾಗಿ ಕೊಡುವ ॥ 1 ॥ ಮಟ್ಟತಾಳ ಇದೇ ವಾರಣಾಸಿ ಉದಧಿ ಬಂಧನಾ ಇದೇ ದ…