Haridasa Sahitya — Vyasadasa
Venkatesha Mahatme Sulaadi 3 — Venkathadri mahime sulaadhi
ಸುಳಾದಿ ೩ — ವೇಂಕಟಾದ್ರಿ ಮಹಿಮೆ ಸುಳಾದಿ
Composer: Vijaya Dasaru · Deity: Venkatesha · Genre: Sulaadi
Kannada lyrics
ವೇಂಕಟಾದ್ರಿ ಮಹಿಮೆ ಸುಳಾದಿ ರಾಗ ವಸಂತ ಧ್ರುವತಾಳ ಗಿರಿಯ ಶಿಖರವ ನೋಡಿ ಶಿರವಾಗಿ ಕರಮುಗಿದು ಮರಳೆ ಸಾಷ್ಟಾಂಗ ನಮಸ್ಕಾರ ಮಾಡಿ ಪರಮ ಭಕ್ತಿಯಿಂದ ಕೊಂಡಾಡಿ ನಲಿದಾಡಿ ಪರಿ ಪರಿವಿಧದಿಂದ ನೆನಿಸಿ ನೆನಿಸೀ ಧರೆಯೊಳಗಿದೆ ಮೇರು ಪರ್ವತದ ಮಗನೆನಿಸಿ ಕರೆಸಿಕೊಳ್ಳುತ್ತಿದೆ ವೇಂಕಟಾಖ್ಯ ನಾಮಾ ಸ್ಮರಿಸಿ ಮನ ಬುದ್ಧಿಯಲ್ಲಿ ಪರವಶ ಮಾಡಿ ನಿಂ- ದಿರದೆ ವಿಚಿತ್ರಮಯವಾದ ಗಿರಿಯಾ ಮಿರಿ ಮಿರಿ ಮಿಂಚುತ್ತಿದೆ ದಶದಿಕ್ಕಿನೊಳಿದಕ್ಕೆ ಸರಿ ಸರಿ ಸರಿಗಾಣೆ ನಿಸ್ಸಂದೇಹಾ ಸುರ তরುವಿನಂತೆ ಬೇಡಿದ ಇಷ್ಟಾರ್ಥಗಳೆಲ್ಲ ಕರೆವುತ್ತಿದೆ ಶಬ್ದಾರ್ಥ ತಿಳಿದ ನರಗೆ ಸುರರು ಸನಕಾದಿ ಮುನಿ ಸಮಸ್ತ ಮುಕ್ತರು ತರು ಗುಲ್ಮ ಲತಾ ವಾರಿಚರ ಖಗ ಮೃಗ ನರರು ಮೊದಲಾದ ರೂಪ…