Haridasa Sahitya — Vyasadasa

Venkatesha Mahatme Sulaadi 2 — Sri venkatagiri mahatme sulaadhi

ಸುಳಾದಿ ೨ — ಶ್ರೀ ವೇಂಕಟಗಿರಿ ಮಹಾತ್ಮೆ ಸುಳಾದಿ

Composer: Vijaya Dasaru · Deity: Venkatesha · Genre: Sulaadi

Kannada lyrics

ಶ್ರೀ ವೇಂಕಟಗಿರಿ ಮಹಾತ್ಮೆ ಸುಳಾದಿ ರಾಗ ಮುಖಾರಿ ಧ್ರುವತಾಳ ಧನ್ಯನಾದೆನು ಇಂದೀ ಪುಣ್ಯ ಗಿರಿಯ ತಾ- ರುಣ್ಯ ಭಕ್ತಿಯಲಿಂದ ದೈನ್ಯ ಮನದಲಿ ಕಂಡೆ ಅನ್ಯಾಯಗಳಿಸುವ ಮನ್ಯು ಪಾಪವೆಂಬಾ- ರಣ್ಯಕೆ ಹವ್ಯವಾಹನು ತೋರುತ್ತಿದೆ ಗಣ್ಯವ ಇದರ ಲಾವಣ್ಯ ವರೇಣ್ಯವ ಬಣ್ಣಿಸಲರಿದು ಹಿರಣ್ಯಗರ್ಭಗಾದರೂ ಕನ್ಯಾ ಧಾರಿಣಿ ಹಿರಣ್ಯ ತುಲಾಭಾರಾ ಅನ್ನದಾನಾದಿಗಳು ಅನೋನ್ಯ ಮಾಡಲು ಅನ್ಯಥಾ ಈ ಯಾತ್ರೆ ಪುಣ್ಯಕೆ ಫಲ ಸಾ- ಮಾನ್ಯವೆನಿಸುವುದು ಸೌಜನ್ಯರು ಲಾಲಿಪುದು ಕನ್ಯಾಪತಿಯ ಕಾರುಣ್ಯ ಮೂರ್ತಿ ಪಾಂಚ- ಜನ್ಯ ಪಾಣಿ ನಮ್ಮ ವಿಜಯವಿಠ್ಠಲನು ಶಾ- ರಣ್ಯರಿಗೆ ಅನುಗುಣ್ಯ ನಡೆಸುವ ॥ 1 ॥ ಮಟ್ಟತಾಳ ಸಪ್ತ ಪೆಡೆಗಳು ತಪ್ತ ಕಾಂಚನದಂತೆ ಸಪ್ತ ರಸನಿಧಿ ಸಪ್ತ ದ್ವೀಪದ…