Haridasa Sahitya — Vyasadasa
Venkatesha Mahatme Sulaadi 1 — Sri venkatesha parvata mahatme sulaadhi
ಸುಳಾದಿ ೧ — ಶ್ರೀ ವೇಂಕಟೇಶ ಪರ್ವತದ ಮಹಾತ್ಮೆ ಸುಳಾದಿ
Composer: Vijaya Dasaru · Deity: Venkatesha · Genre: Sulaadi
Kannada lyrics
ಶ್ರೀ ವೇಂಕಟೇಶ ಪರ್ವತದ ಮಹಾತ್ಮೆ ಸುಳಾದಿ ರಾಗ ಮೋಹನ ಧ್ರುವತಾಳ ಶ್ರೀನಿವಾಸನ ನಿಧಿಯಾನು ಬಣ್ಣಿಸಲಿನ್ನು ನಾನೆಲ್ಲಿ ಇದರ ಸಮಾನಧಿಕವಾದ ಭೂ ನಿತಂಬಿನಿಯೊಳು ಕಾಣೆನೊ ಅರಸಲು ಆ ನಿಜಯರನುದಿನ ಎಣಿಸೆಣಿಸೆ ವಾಣಿ ಬರಿದೆ ಗುಣವಾನು ತೀರದೆ ನಿತ್ಯ ಈ ನಿಧಿಯಾ ಪುಣ್ಯ ಶ್ರೇಣಿಯನು ಧ್ಯಾನಿಸಲಾರದೆ ಮೌನವಾಗುವೆನಯ್ಯ ಹೀನಮಾನವ ಮಿತಿಯಾನು ನುಡಿದ ಫಲ ವರ್ಣನೆ ಗೈವೆನೆ ಚೂರ್ಣ ಅಂತ ವಿಡಿದು ಚಾಣೂರಾರಿ ರಂಗ ವಿಜಯವಿಠ್ಠಲರೇಯಾ ನೀನೆ ಬಲ್ಲೆ ನಿನ್ನಿದರ ಆನಂದ ವೈಭವ ॥ 1 ॥ ಮಟ್ಟತಾಳ ರತ್ನ ಸಮವಿನ ಸುತನಿಗೆ ವೇಂಕಟ ಪ- ರ್ವತ ನೆಂಬಭಿದಾನಾ ಹಿತವಾಗಿ ಇರಲೂ ಗತ ಶರಣ ಮಾರುತ ದೇವರಿಗೆ ಬಿಡದೆ ಪ್ರತಿವಾದಗಳಾಗೆ ಖತಿಯನಂತ ಮಾ- ರುತಿ ಪತಿ ಬೀಸಲು ಗ…