Haridasa Sahitya — Vyasadasa

Tirthakshetra Sulaadi 99 — Kashi Bindumadhava stotra sulaadhi

ಸುಳಾದಿ ೯೯ — ಕಾಶಿ ಬಿಂದುಮಾಧವ ಸ್ತೋತ್ರ ಸುಳಾದಿ

Composer: Vijaya Dasaru · Deity: Bindumadhava / Kashi · Genre: Sulaadi

Kannada lyrics

ಕಾಶಿ ಬಿಂದುಮಾಧವ ಸ್ತೋತ್ರ ಸುಳಾದಿ ರಾಗ ರೇವತಿ ಧ್ರುವತಾಳ ಶ್ರೀ ಕೇಶಾಯಾದಿ ಯಾವದೊಂದಂಗಾ ಪೊತ್ತಾ ಲೋಕೈಕಾ ವೈಲಕ್ಷಣ್ಯ ಪೂರ್ಣಾಪೂರ್ಣಾ ಸಾಕಾರಾ ಮೂರುತಿ ಪ್ರಾಣೇಂದಿರಾಪತಿ ಅ - ನೇಕರೂಪ ಕ್ರೀಯಾ ಗುಣಗಣನಂತಾನಂತ ಶೋಕವಿನಾಶ ನಾರಸಿಂಹಾದಿ ಕ್ಷೇತ್ರಜ್ಞ | ಲೋಕೇಶ ಮೊದಲಾದ ತತುಶಬ್ದದಿಂದ ಓಂಕಾರಾದಿ ವರ್ಣಾಭಿದೇಯಾ ಶ್ರೀ ಕಾಂತಾ ಸಮಸ್ತ ಶಕ್ತಿ ಜ್ಞಾನಾತ್ಮಕ ವೈಕುಂಠನಾಯಕ ವೈತರಣಿ ತಾರಕಾ ಏಕಾರ್ಣವಾಸ ವಟಪತ್ರ ಶಾಯಿ ಏಕಾಂತಿಗಳ ಮನೋರಥವೆ ರಾಕ್ಷಸಾರಾತಿ ಗೋಕುಲಾ ಭೂಮಿ ಪಾವನ ಜೀವನಾ ವೈಕಾರಿಕ ತೈಜಸ ತಾಮಸ ಕರ್ಮ, ಪುಣ್ಯ ಶ್ಲೋಕಾನೆ ನಿನಗೆ ಅರ್ಪಿತವಾಗಲಿ ನಾಕ ನದಿಯ ಜನಕ ವಿಜಯವಿಠಲ ವಿ - ವೇಕಬುದ್ದಿಯ ಕೊಡು ಬಿಂದು ಮಾಧವ ಕಾಶಿ ||…