Haridasa Sahitya — Vyasadasa

Tirthakshetra Sulaadi 98 — Sri Kashi mahatma sulaadhi

ಸುಳಾದಿ ೯೮ — ಶ್ರೀ ಕಾಶಿ ಮಹಾತ್ಮ ಸುಳಾದಿ

Composer: Vijaya Dasaru · Deity: Kashi / Vishnu · Genre: Sulaadi

Kannada lyrics

ಶ್ರೀ ಕಾಶಿ ಮಹಾತ್ಮ ಸುಳಾದಿ ರಾಗ ಮಧ್ಯಮಾವತಿ ಧ್ರುವತಾಳ ಪಂಚಗಂಗಿಯ ಯಾತ್ರಿ ಮಾಡುವುದು ಚನ್ನಾಗಿ ಕೊಂಚವಲ್ಲವು ಕಾಣೋ ತ್ರಿಜಗದೊಳೂ ಸಂಚಿತಾ ಪ್ರಾರಬ್ಲಾಗಾಮಿ ನಾಶವಾಗುವುದು ವಿ ರಂಚಿ ಜನಕ ರಂಗ ಒಲಿವ ಬಂದು ಮುಂಚು ಮುಂಚಾಗಿ ಜ್ಞಾನಪೆಚ್ಚುವದೂ ಪ್ರಾ ಪಂಚದೊಳಗಿದ್ದರು ನಿರ್ಲಿಪ್ತನೋ ಕಿಂಚಿತು ಕಾಲಾ ಇಲ್ಲಿ ವಾಸಾವಾಗಿರಲು ಸಂ- ಕಿಂಚಿನನಾಗುವ ಜ್ಞಾನಧನದೀ ಚಂಚಲತನ ಬಿಟ್ಟು ಏಕಭಕುತಿಯಿಂದ ಸಂಚಗಾರವನೀಯೊ ಹರಿ ಭಟರಿಗೆ ಪಂಚ ಭಗವದ್ರೂಪ ಮನದೊಳು ನಿಲಿಸಿರಿ ಪಂಚ ಬುದ್ಧಿಯಿಂದ ಉತ್ತಮರೊಳಗೆ ಸಂಚಾರವನೆ ಇದೆ ಸಾಧನವೇ ಎಂದು ಮಿಂಚುವ ಕಾಯದಲ್ಲಿ ನಲಿದಾಡುತ್ತಾ ಪಂಚಗಂಗಿಯ ಸ್ನಾನ ಸುಲಭವಲ್ಲವೊ ಮರುಳೆ ಪಂಚಮೊಗನ ಕರುಣಾ ಪಡಿಯಬೇಕು ಅಂಚಿ…