Haridasa Sahitya — Vyasadasa

Tirthakshetra Sulaadi 97 — Prayaga mahatma sulaadhi

ಸುಳಾದಿ ೯೭ — ಪ್ರಯಾಗದ ಮಹಾತ್ಮ ಸುಳಾದಿ

Composer: Vijaya Dasaru · Deity: Prayaga / Madhava · Genre: Sulaadi

Kannada lyrics

ಪ್ರಯಾಗದ ಮಹಾತ್ಮ ಸುಳಾದಿ ರಾಗ ರಂಜನಿ ಧ್ರುವತಾಳ ಇದು ಪುಣ್ಯಭೂಮಿ ಆರ್ಯಾವೃತ್ತಾಂತರ್ಗತ ಇದು ಬ್ರಹ್ಮ ವೈವರ್ತಕ ದೇಶಾವೆನ್ನಿ ಇದು ಅಂತರಂಗ ವೇದಿ ಷಟ್ಟುಲ ಮಧ್ಯವೆನ್ನಿ ಇದು ವರ ರಾಜಾತಿ ತೀರ್ಥ ಪ್ರಯಾಗವೊ ಇದು ತ್ರಿವೇಣಿ ಎನಿಸುವಾದು ಇಲ್ಲಿ ಮಾಧವರಾಯಾ ಇದು ವಿಷ್ಣು ಪ್ರಜಾಪತಿ ಕ್ಷೇತ್ರವೆನ್ನಿ ಇದು ಗಂಗಾ ಸರಸತಿಯ ಯಮುನಾತೀರವೆನ್ನಿ ಇದು ವೇದ ಸ್ಮತಿ ಪ್ರತಿಪಾದ್ಯವೆನ್ನಿ ಇದೆ ಇದೆ ಆದಿಯಲ್ಲಿ ಹರಿಯಿಂದ ನಿರ್ಮಾಣ ಇದಕ್ಕಿಂತ ಅಧಿಕವಿಲ್ಲಾ ಸಾಮ್ಯವಿಲ್ಲಾ ಇದೆ ಮಸ್ತಕ ಸ್ಥಾನ ನಾಭಿ ವಾರಣಾಸಿ ಪದಸ್ಥಾನ ಗಯಾವೆನ್ನಿ ಸರ್ವದಲ್ಲಿ ಇದೆ ಇದೆ ಪ್ರಣವಾಕಾರ ತ್ರಯಾಕ್ಷೇತ್ರ ಕೂಡಿದರೆ ಇದೆ ಪೂರ್ಣಯಾತ್ರೆಯೆನ್ನಿ ಜ್ಞಾನಿಗಳಿಗೇ ತ್ರಿದ…