Haridasa Sahitya — Vyasadasa
Tirthakshetra Sulaadi 96 — Panduranga atroddhara prarthana sulaadhi
ಸುಳಾದಿ ೯೬ — ಶ್ರೀಪಾಂಡುರಂಗನ ಆತ್ರೋದ್ಧಾರ ಪ್ರಾರ್ಥನೆ ಸುಳಾದಿ
Composer: Vijaya Dasaru · Deity: Panduranga · Genre: Sulaadi
Kannada lyrics
ಶ್ರೀಪಾಂಡುರಂಗನಲ್ಲಿ ಆತ್ರೋದ್ಧಾರ ಪ್ರಾರ್ಥನೆ ಸುಳಾದಿ ರಾಗ ವಲಚಿ ಧ್ರುವತಾಳ ವ್ಯಕ್ತನಾಗಿ ಶಕ್ತನಾಗಿ ವ್ಯಾಪಕ ಪಾಂಡುರಂಗ ಭಕ್ತರಿಗಾಗಿ ಭಾಗ್ಯನಾಗಿ ಬಂದಾ ಬಂದಾ ಪಂಢರಿರಾಯಾ ಉಕ್ತಿಗಳೊಂದೊಂದು ಲಾಲಿಸಿದರೆ ಮುಕ್ತಾರು ಬೆರಗಾಗುತಿಪ್ಪಾರು ಮುಕ್ತಿ ಕ್ರೀಡೆ ಇಲ್ಲೆ ತೋರಿದಾ ತವಕಾದಿಂದಲಿ ಕುಣಿವುತ್ತ ಮೌಕ್ತಿಕಹಾರಾ ನಾನಾಭರಣಾ ಧರಿಸಿ ಗೋವಳ ಒಡಗೂಡಿ ತ್ಯಕ್ತಾ ವೈದಿಕ ಮಿಕ್ಕಾದವರು ನೆರೆದು ಜಯಜಯಾವೆನುತಿರೆ ಯುಕ್ತಿವಂತರು ಯುಗಯುಗದಲಿ ಇದೆ ಪರಿ ನೋಳ್ಳರು ಭಕ್ತಿಗೊಲಿಪಾದು ಈ ಪರಿ ಭಕ್ತಿ ಪಾಡಿದಾ ಜನಕೆ ಮನಸಿನಲ್ಲಿ ಕನಸಿನಲ್ಲಿ ಭುಕ್ತಿ ಮೊದಲಾದಾ ಸಂಪತ್ತುನೀವ ಸುರಧೇನು ಇದ್ದಂತೇವೆ ಭಕ್ತಿಗೊಲಿದು ಈ ಪರಿ ರಿಕ್ತಾರಿಗತಿ ಪ್ರೀಯಾ…