Haridasa Sahitya — Vyasadasa
Tirthakshetra Sulaadi 95 — Sri Pandurangadevara sulaadhi
ಸುಳಾದಿ ೯೫ — ಶ್ರೀಪಾಂಡುರಂಗದೇವರ ಸುಳಾದಿ
Composer: Vijaya Dasaru · Deity: Panduranga / Vitthala · Genre: Sulaadi
Kannada lyrics
ಶ್ರೀಪಾಂಡುರಂಗದೇವರ ಸುಳಾದಿ ರಾಗ ವರಾಳಿ ಧೃವತಾಳ ಜನನಿ ರುಕುಮಿಣಿ ಜನಕ ವಿಠಲಾ ನನಚತುಷ್ಟನು ಭ್ರಾತಾನು ಅನಲನೇತ್ರನು ಆತನ ಸುತ ಅನುದಿನ ನಿಜ ಬಾಂಧವ ಅನಿಲದೇವನು ಮುಖ್ಯತಗುರು ಅನಿಮಿಷರೂ ಬೆಂಬಲಾರೆ ದನುಜ ದೈತ್ಯರು ಹತ್ತಾದವರು ಮನಿಯ ದಾಸಿಯರು ಮಾರಿ ಮೃತ್ಯುಗ - ಳಿನಿತು ಹರಿದಾಸರಿಗೆ ಅಯ್ಯಾ ಅಯ್ಯಾ ಜನನಿ ರುಕುಮಿಣಿ ವನಜಾಂಡದೊಳಗೆ ಇವರಿಗೆ ಎಣೆ ಇಲ್ಲಾ ಆವಲ್ಲಿ ಎಂಬರೂ ಘನ ವಿಜಯವಿಠಲರೇಯನ ನೆನವರ ಸುಕೃತವಿನ್ನೆಂತೋ ||೧|| ಮಟ್ಟತಾಳ ಕಡಲಶಯನ ನಾಮಾ ನುಡಿ ಎಂಬೋ ಖಡ್ಗ- ವಿಡಿದು ದುರಿತರಾಶಿಯಾ ತಡದು ತುರುಬಿ ನಿಲಿಸಿ ಕಡಿಕಡಿ ಎನುತಾಲಿ ಕಡಿದೊಟ್ಟುವರಯ್ಯಾ ಸುಡುವ ದಾವಾನನಾ ಉಡಿಯಲ್ಲಿ ಕಟ್ಟುವರು ಪಡಿಗಾಣೆ ಹರಿಯಾ ಅಡಿಗಳನಂಬಿ…