Haridasa Sahitya — Vyasadasa

Tirthakshetra Sulaadi 94 — Sri Panduranga sulaadhi

ಸುಳಾದಿ ೯೪ — ಶ್ರೀಪಾಂಡುರಂಗ ಸುಳಾದಿ

Composer: Vijaya Dasaru · Deity: Panduranga / Vitthala · Genre: Sulaadi

Kannada lyrics

ಶ್ರೀಪಾಂಡುರಂಗ ಸುಳಾದಿ ರಾಗ ಮಧುವಂತಿ ಧ್ರುವತಾಳ ಅಚ್ಯುತಾನಂತನ ಕಂಡೆ ಸಚ್ಚಿದಾನಂದೈಕ ಸರ್ವೋತ್ತುಮನ ಕಂಡೆ ಅಚ್ಚಮಲ್ಲಿಗೆ ವನಮಾಲಾನ ಕಂಡೆ ಪಚ್ಚ ಕಡಗವಿಹ್ಯರಾ ಕಂಡೆ ನೆಚ್ಚಿದ ಭಕ್ತರ ಪೊರೆವ ದಾತನ ಕಂಡೆ ಅಚ್ಯುತಾನಂತನ ಅಚ್ಚರಿಯಾ ದೈವಾವೆ ವಿಜಯವಿಟ್ಠಲರೇಯಾ ನಿಚ್ಚಾ ಪಂಢರಪುರಿವಾಸಾ ರಂಗನ ಕಂಡೆ ವಾಸುದೇವನ ಕಂಡೆ || 1 || ಮಟ್ಟತಾಳ ವಾಸುದೇವನ ಕಂಡೆ ವಾಮನನಾ ಕಂಡೆ ಕೇಶನಾಶನ ಕಂಡೆ ಕೇಶವನಾ ಕಂಡೆ ವಾಸವಾನುಜನಾಗಿ ವಾಗೀಶಪಿತನ ಕಂಡೆ ಶ್ರೀಶ ವಿಜಯವಿಟ್ಠಲೇಶ ಚಂದ್ರಭಾಗಾ - ವಾಸ ರಂಗನ ಕಂಡೆ ವರನಾ ಕಂಡೆ || 2 || ತ್ರಿವಿಡಿತಾಳ ಕುಲಾಯಿ ಶಿರದಲ್ಲಿ ಇಟ್ಟ ಸೊಬಗು ಕಂಠ - ದಲ್ಲಿ ಮೆರೆವ ಎಳೆ ತುಳಸಿಮಾಲೆ ನವ - ಮಲ್ಲಿಕಾ ಸುರಗಿ ಜ…