Haridasa Sahitya — Vyasadasa

Tirthakshetra Sulaadi 93 — Sri Panduranga mahima sulaadhi

ಸುಳಾದಿ ೯೩ — ಶ್ರೀಪಾಂಡುರಂಗ ಮಹಿಮಾ ಸುಳಾದಿ

Composer: Vijaya Dasaru · Deity: Panduranga · Genre: Sulaadi

Kannada lyrics

ಶ್ರೀಪಾಂಡುರಂಗ ಮಹಿಮಾ ಸುಳಾದಿ ರಾಗ ಅಭೋಗಿ ಧ್ರುವತಾಳ ಸುಂದರಮಯವಾದ ದ್ವಂದ್ವ ಚರಣವನ್ನು ಇಂದು ಕಂಡೆನು ಬಂದು ಅಂದು ಕಾಳಿಂದಿಯಾ ಧುಮುಕಿ ನಾ - ಗೇಂದ್ರನಾ ಫಣಿಯಲ್ಲಿ ಕುಣಿಕುಣಿದಾಡಲು ದುಂದುಭಿ ರಭಸಾ ಮೊರಿಯೆ ಗಗನ - ದಿಂದಲೆ ಪೂಮಳೆ ಬಿಡದೆ ಸುರಿಯೆ | ವೃಂದಾರಕವೃಂದ ಚಂದಾಗಿ ಸರಸಿಜ ನಂದನ ಸಹಿತ ವಂದನೆ ಗೈವುತಿರೆ ನಂದನಂದನ ಗೋಪಿಯ ಕಂದ ಅಂದಂದಾಡಿದ ಗೋವಿಂದ ವಿಜಯವಿಟ್ಠಲಾ ನಿಂದು ನಲುವಿಂದಾ ಮೆರೆವನು ಇಲ್ಲಿ ಇಂದಿರೆಯರಸನ ನಂದ ಮೂರುತಿಯಾ || 1 || ಮಟ್ಟತಾಳ ಇದೆ ವೈಕುಂಠಾ ಇದೆ ಶ್ವೇತದ್ವೀಪಾ ಇದೆ ಅನಂತಾಸನ ಇದೆ ಗೋಕುಲವು ಇದೆ ವೃಂದಾವನ ಇದೆ ದ್ವಾರಾವತಿ ಇದೆ ನಮ್ಮಾ ಯದುಪತಿ ಇಪ್ಪಾನಗರಾ | ಇದೆ ನಮ್ಮ ತಿರುಮಲಾ ವಿಜಯವಿಟ…