Haridasa Sahitya — Vyasadasa
Tirthakshetra Sulaadi 92 — Sri Panduranga deva charana stotra sulaadhi
ಸುಳಾದಿ ೯೨ — ಶ್ರೀಪಾಂಡುರಂಗ ದೇವರ ಚರಣ ಸ್ತೋತ್ರ ಸುಳಾದಿ
Composer: Vijaya Dasaru · Deity: Panduranga · Genre: Sulaadi
Kannada lyrics
ಶ್ರೀಪಾಂಡುರಂಗ ದೇವರ ಚರಣಸ್ತೋತ್ರ ಸುಳಾದಿ ರಾಗ ಮಾಂಡ್ ಧ್ರುವತಾಳ ತರುಣ ಅರುಣ ಕಿರಣದಂತೆ ಪೋಲುವ ಚರಣ ತರಣಿ ಹರಿಣಾಂಕರನು ಧರಣ ಮಾಡುವ ಚರಣ ವರುಣ ವಾರಣ ನಿತ್ಯಾಚರಣೆ ಮಾಡುವ ಚರಣ ತರುಣಿ ದೌಪದಿಯ ಭಯ ನಿವಾರಣ ಮಾಡಿದ ಚರಣ ಧರಣಿಯೊಳು ಪುಟ್ಟಿ ಸಂಚರಣ ಮಾಡಿದ ಚರಣ ಕರುಣದಲ್ಲಿ ದಾಸರನಾದರಣೆ ಮಾಡಿದ ಚರಣ ಸ್ಮರಣೆಮಾಡುವರಿಗೆ ಸಾಭರಣವಾಗುವ ಚರಣ ಶರಣಾಗತಿ ಸತತ ಪಂಢರಿಪುರವಾಸ ವರಣವಾಗಿ ಎನ್ನ ಹರಣ ಉಳ್ಳನಕ ನಿನ್ನ ಚರಣ ಸಂದರುಶನ ಲೇಸಾಗಿ ಈವುತ್ತ ಶಿರದಲ್ಲಿ ಇಡುವುದು ಶಿರಿ ರಮೆಯ ಸಿರಿ ವರ ಕರುಣಿ ವಿಜಯವಿಠಲರೇಯ ನಿರುತ ಪರಣ ನಿನ್ನದು ಸದಾ ಪರಿಣಾಮನೆನಿಸೊ || 1 || ಮಟ್ಟತಾಳ ಭಕುತರಾಪತ್ತು ಪರಿಹರಿಸುವ ಚರಣ ಲಕುಮಿಯ ಮೊಗಕ್ಕೆ ಕನ್…