Haridasa Sahitya — Vyasadasa

Tirthakshetra Sulaadi 91 — Panduranga aparoksha sulaadhi

ಸುಳಾದಿ ೯೧ — ಪಾಂಡುರಂಗ ಅಪರೋಕ್ಷ ಸುಳಾದಿ

Composer: Vijaya Dasaru · Deity: Panduranga / Krishna · Genre: Sulaadi

Kannada lyrics

ಪಾಂಡುರಂಗ ಅಪರೋಕ್ಷ ಸುಳಾದಿ ರಾಗ ತೋಡಿ ಧ್ರುವತಾಳ ಅಂದು ಮಾನಿಸನಾಗಿ ಲೋಹಕ್ಷೇತ್ರದಲ್ಲಿ ಬಂದು ಸುಳಿದು ಪೋದುದು ಅರಿಯಾದೆ ಮಂದಮತಿಗ ನಾನು ಮಾನುಷ್ಯಾನ್ನವ ಬಿಡದೆ ತಿಂದ ಪ್ರಯುಕ್ತದಲ್ಲಿ ಇನಿತಾಯಿತೊ ಹಿಂದೆ ಮಾಡಿದ ಕರ್ಮಾವರ್ಕವಾಗಿದ್ದ ಮರವೋ ಸಂದೇಹ ಗೊಳಿಸುವದು ನಿನ್ನ ಬಗೆಯೋ ಎಂದಿಗೆಂದಿಗೆ ತಿಳಿಯಾದಿದ್ದೆ ವಿಷಯಂಗಳಿಗೆ ಪೊಂದಿಕೊಂಡು ನಿನ್ನ ಮಹಾಮಹಿಮೆಯಾ ಇಂದು ನೀನೆ ಕೃಪೆಯಿಂದ ಬಾಂಧವನಾಗಿ ಬಂದು ತಿಳುಪಿದ ಕಾರಣದಿಂದಲಿ ನಂದವಾಯಿತು ಮನಕೆ ಉತ್ಸಾಹವೆಂದೆಂಬೋ ಸಿಂಧುವಿನೊಳಗೆ ಮುಣುಗಿ ತೇಲಾಡಿದೆ ಅಂದೆ ಈ ಪರಿಯಲ್ಲಿ ತಿಳಿಸಿದರಾದರೆ ಮಂದಿಯೊಳಗೆ ತಲೆ ಹೊರೆಯಾಗುವೆನೆ ಇಂದಲ್ಲ ನಿನ್ನ ಮಾಯಾ ಅನಂತಕಲ್ಪಕೆ ಒಂದೊಂದು ಪರಿ ಉಂಟು…