Haridasa Sahitya — Vyasadasa

Tirthakshetra Sulaadi 90 — Pandharapuri Panduranga mahima sulaadhi

ಸುಳಾದಿ ೯೦ — ಪಂಢರಪುರಿ ಪಾಂಡುರಂಗನ ಮಹಿಮಾ ಸುಳಾದಿ

Composer: Vijaya Dasaru · Deity: Panduranga · Genre: Sulaadi

Kannada lyrics

ಪಂಢರಪುರಿ ಪಾಂಡುರಂಗನ ಮಹಿಮಾ ಸುಳಾದಿ ರಾಗ ಪಂತುವರಾಳಿ ಧ್ರುವತಾಳ ನಾನಾಪರಿಯಿಂದ ನಿನ್ನ ಚರಣಾಬ್ದಾ ಮಾನಿಸದಲ್ಲಿ ಧ್ಯಾನಿಸೆ ಕಾಣಿಸದಿಪ್ಪ ಕಪಟ - ವೇನಯ್ಯಾ ನಾನು ಬಲು ಅಪರಾಧಿಯೋ ಸ್ನಾನ ಸಂಧ್ಯಾವಿಲ್ಲದಿರೇ ವಿಪ್ರ - ಯೋನಿಯಲ್ಲವೆ ಜಾತಿಯು ಭಾನುಕೋಟಿತೇಜಾ ಭಕ್ತರ - ಧೇನು ಸಂತತ ದಯಾಂಬುಧಿ ಹೀನ - ಯೋನಿಜ ಮಾನವರು ನಿನ್ನ ಏನು ತುತಿಪಾರು ಕೇಳಿದಯ್ಯಾ ನೀನೆ ತಾವೇ ಎಂದು ಭಜಿಸಿ ಇಂಥ ಅ - ಜ್ಞಾನದ ಕುಣಿವಾರತಿ ಏನೆಂಬೆ ನಿನ್ನ ಮಾಯಾ ಶಕ್ತಿಗೆ ಆನು ವಿಸ್ಮಿತನಾಗುವೆ ಶ್ರೀನಾರಿಪತಿ ಬೊಮ್ಮನಯ್ಯಾ ಕೃ - ಶಾನು ನೇತ್ರನ ತಾತನೆ ಆ ನಿರ್ಜರಾದಿ ವಂದ್ಯ ಮಮಸ್ವಾಮಿ ಈ ನುಡಿ ನಿನಗದೋ ಮಾಣಿ ನಿನ್ನ ಸ್ವಭಾವ ಎಂದಿಗೂ ಮಾಣಿಯಲ್ಲಾವೆ ಪಿರಿಯ…