Haridasa Sahitya — Vyasadasa

Tirthakshetra Sulaadi 89 — Sri Pandharapur kshetra mahima sulaadhi

ಸುಳಾದಿ ೮೯ — ಶ್ರೀಪಂಢರಾಪುರ ಕ್ಷೇತ್ರ ಮಹಿಮಾ ಸುಳಾದಿ

Composer: Vijaya Dasaru · Deity: Panduranga / Vitthala · Genre: Sulaadi

Kannada lyrics

ಶ್ರೀಪಂಢರಾಪುರ ಕ್ಷೇತ್ರ ಮಹಿಮಾ ಸುಳಾದಿ ರಾಗ ಕಲ್ಯಾಣಿ ಧ್ರುವತಾಳ ಬಂದೆನೊ ಎಲೊ ಹರಿಯೆ ಪಂಢರಪುರಿ ದೊರಿಯೆ ಇಂದೆನ್ನ ಪಾಲಿಸೊ ಬಿನ್ನಪವ ಲಾಲಿಸೋ ಮಂದನು ನಾನಯ್ಯಾ ಮಹಾತ್ಮ ನೀನಯ್ಯಾ ಮಂದಾಕಿನಿ ಜನಕ ಲಿಂಗ ಭಂಗದತನಕ ಒಂದು ಸಾಧನ ಕಾಣೆ ನಿನ್ನ ಸ್ಮರಣೆ ಮಾಣೆ ಬಂಧು ಬಳಗ ನೀನೆ ಭಕ್ತಾರಮರಧೇನು ಎಂದೆಂದಿಗೆ ನಿನ್ನ ಪಾಡಿದವಗೆ ಬನ್ನಾ ಪೊಂದಿಪ್ಪವೆಂದು ಪ್ರತಿದಿನದಲಿ ನಿಂದು ವೃಂದಾರಕ ವೃಂದ ಪೊಗಳಿದರಾನಂದ ನಂದನಾಗಿ ಕೇಳಿ ಘನ ಸಂತಸ ತಾಳಿ ಬಂದಿನೊ ಎಲೊ ಹರಿಯೆ ಪಂಢರಪುರಿ ದೊರಿಯೆ ಬಿಂದು ಮಾತುರ ಪುಣ್ಯ ಇಲ್ಲವೊ ಕಾರುಣ್ಯ - ಸಿಂಧು ಪುಂಡರೀಕವರದ ನಿಷ್ಕಳಂಕ ಚಂದಿರಭಾಗ ಭೀಮಾತೀರ ಗೋವಾಗಾ ನಂದ ವಿಗ್ರಹ ವಿಜಯವಿಟ್ಠಲ ಮುನಿಗೇಯ ವಂದಿಸ…