Haridasa Sahitya — Vyasadasa
Tirthakshetra Sulaadi 88 — Shweta shringi mahatma sulaadhi
ಸುಳಾದಿ ೮೮ — ಶ್ವೇತಶೃಂಗಿ ಮಹಾತ್ಮ ಸುಳಾದಿ
Composer: Vijaya Dasaru · Deity: Krishna / Shweta shringi · Genre: Sulaadi
Kannada lyrics
ಶ್ವೇತಶೃಂಗಿ ಮಹಾತ್ಮ ಸುಳಾದಿ ರಾಗ ಸಿಂಧುಭೈರವಿ ಧ್ರುವತಾಳ ಅನ್ನದಾನ ಮಾಡದಗೋಸುಗ ಶ್ವೇತರಾಯ ತನ್ನ ಮಾಂಸ ತಾನೆ ಕೆತ್ತಿಕೊಂಡೂ ತಿನ್ನು ತಿಪ್ಪನು ನಿತ್ಯ ಕೇಶವ ಬಡುತಲಿ ಬನ್ನದೊಳಗಾಗಿ ಸ್ವರ್ಗದಲ್ಲಿ ವಾಸ ಮುನ್ನೆಗತಿ ಕಾಣದೆ ಇರುತಿರೆ ನಾನಾಧರ್ಮ ಅನಂತ ಮಾಡಿದ ಕಾಲಕ್ಕಾಗೇ ಅನ್ನದಾನ ಮಾಡದಗೋಸಗ ಈ ಬಗಿಯು ಇನ್ನೇನು ಪೇಳಲಿ ಇತ್ತ ನಾರಂದ ಮುನಿ ಪನ್ನಗಶಯನನ ಪಾಡುತಲೀ ಘನ್ನತೆಯಿಂದ ರಾಯಾನಿದ್ದೆಡಿಗೆ ಬರಲು ಸನ್ನುತಿಸಿ ತನ್ನ ಸ್ಥಿತಿಯಾ ಪೇಳೆ ಚೆನ್ನಾಗಿ ಲಾಲಿಸಿ ಅಹಹ ಹರಿಯೆ ಮಹಿಮೆ ಬಣ್ಣಿಸಲರಿದೆಂದು ಶಿರವ ದೂಗಿ ತನ್ನೊಳಗೆ ತಾನೆ ವಿಸ್ಮಿತನಾಗಿ ನುಡಿದನಾಗ ಬನ್ನಣೆಯಿಂದ ಶ್ವೇತ ಭೂಪತಿಗೆ ಆನಂತದೊಳಗೊಂದು ಕೃಷ್ಣ ಉತ್ತರವಾಹಿನಿ ಪ…