Haridasa Sahitya — Vyasadasa
Tirthakshetra Sulaadi 87 — Chaya kshetra sulaadhi
ಸುಳಾದಿ ೮೭ — ಛಾಯಾ ಕ್ಷೇತ್ರ ಸುಳಾದಿ
Composer: Vijaya Dasaru · Deity: Chaya Bhagavati / Hari · Genre: Sulaadi
Kannada lyrics
ಛಾಯಾ ಕ್ಷೇತ್ರ ಸುಳಾದಿ ರಾಗ ಚಂದ್ರಕೌನ್ಸ್ ಧ್ರುವತಾಳ ತರಣಿ ತರುಣಿ ತನ್ನ ತವರಮನಿಗೆ ಪೋಪ ಭರದಿಂದ ಸ್ವಚ್ಛಾಯಾವಾ ನಿರ್ಮಾಣವನ್ನೆ ಮಾಡಿ ಸರಿಸಾದಲ್ಲಿ ಇಟ್ಟು ಗುಪ್ತ ಮಾರ್ಗದಲಿಂದ ತೆರಳಿ ಪೋಗಲು ಇತ್ತ ಛಾಯಾವೆಂಬೊ ನಾಮದಲಿ ಕರಿಸಿಕೊಳುತಲಿಪ್ಪ ಪ್ರಮದ ಮಲಮಕ್ಕಳೊಡನೆ ನಿರುತ ಮೆಲ್ಲಮೆಲ್ಲನೆ ಮತ್ಸರ ಮಾಡಲಾಗೆ ಅರಿತು ಆದಿತ್ಯದೇವ ನುಡಿದವಳ ಕೂಡ ಪರಿ ಏನೆಂದು ಪೂರ್ವೋತ್ತರ ತಿಳಪಲಾಗಿ ಕೇಳಿ ಇರದೆ ಕೋಪವ ತಾಳಿ ಶಾಪವನಿತ್ತು ನಿನಗೆ ನರಯೋನಿ ಬರಲಿ ಎಂದು ಗಹಗಹಿಸುತ್ತ ಬಂದು ಮರಳೆ ಮಾತಾಡಿದಳು ಗಂಡನ್ನ ಪ್ರಾರ್ಥಿಸಿ ಕರುಣಿಸು ವಿಶಾಪವಾಗುವಂತೆ ಎನಲು ಹರಿ ನಾರಿರೂಪ ಧರಿಸಿ ಬರಲಾಗಾ ಕಂಡ ಮಾ ತುರದಿಂದಾ ಮೋಕ್ಷಾವೆಂದು ಅಭಯಾಕೊಡಲು, ಛ…