Haridasa Sahitya — Vyasadasa

Tirthakshetra Sulaadi 86 — Harihara bheda vivara sulaadhi

ಸುಳಾದಿ ೮೬ — ಹರಿಹರಭೇದ ವಿವರ ಸುಳಾದಿ

Composer: Vijaya Dasaru · Deity: Harihara · Genre: Sulaadi

Kannada lyrics

ಹರಿಹರಭೇದ ವಿವರ ಸುಳಾದಿ ರಾಗ ಭೌಳಿ ಧ್ರುವತಾಳ ಹರಿಹರರಿಬ್ಬರು ಒಂದೇ ರೂಪವ ಧರಿಸಿ ದುರುಳ ಗುಹಾಸುರನ ಕೊಂದರೆಂದೂ ಮರಳು ಮಾನವರು ತಿಳಿಯಾದೆ ನುಡಿವರು ಹರಿಹರರಿಬ್ಬರು ಒಂದಾಹರೆ ಹರಿಹರರೀರ್ವರು ಏಕವಾದರೆ ಅಂದು ಹರನು ಮೈಮರದು ನಿಂದನ್ಯಾತಕೆ ಧಾರುಣಿಯೊಳಗೆ ಹಿರಣ್ಯಕಶಿಪು ದೈತ್ಯ ಸುರರ ಓಡಿಸಿ ಪ್ರಬಲನಾಗಿರೆ ಪರಮಪುರುಷ ಹರಿ ನರಹರಿ ರೂಪವನ್ನು ಧರಿಸಿ ರಕ್ಕಸನ್ನ ಕೊಲ್ಲುವಾಗಲಿ ಕೇ - ಸರಿಯಾ ಬಳಿಗೆ ಪೋಗಿ ಮಾರೆಯಾ ಬೇಡಿಕೊಂಡು ಮೆರದಾನೇನೋ ಅವತಾರ ಮಾಡಿ ಹರಿಯ ಅದ್ಭತ ಶಕ್ತಿ ನಾನಾ ಲೀಲಾ ವಿನೋದ ಚರಿಸೂವ ಪರಬೊಮ್ಮ ಗುಣಪೂರ್ಣನೂ ತುರಗವದನ ಮತ್ಸಕೂರ್ಮಸೂಕರ ವೇಷ ಯುಗಯುಗದೀ ಧರಿಸಿದಾತನು ಕಾಣೋ ಕರುಣಾಸಿಂಧು ನಮ್ಮ ವಿಜಯವಿಠಲರೇಯಾ…