Haridasa Sahitya — Vyasadasa
Tirthakshetra Sulaadi 85 — Harihara kshetra sulaadhi
ಸುಳಾದಿ ೮೫ — ಹರಿಹರ ಕ್ಷೇತ್ರ ಸುಳಾದಿ
Composer: Vijaya Dasaru · Deity: Harihara · Genre: Sulaadi
Kannada lyrics
ಹರಿಹರ ಕ್ಷೇತ್ರ ಸುಳಾದಿ ರಾಗ ಶಂಕರಾಭರಣ ಧ್ರುವತಾಳ ವಿಹಂಗಗಮನ ದೇವ ವಿಶ್ವಸರ್ವದ ಕಾವ ಅಹಿಶಯ್ಯಾ ಕಾಮನಯ್ಯಾ ಭಕುತಪ್ರಿಯ ಬಹು ಕ್ರೂರ ರೂಪ ಭವದೂರ ಫಾಲಲೋಚನ ಚನ್ನ ಅಹಿಭೂಷಣಗೆ ಈಶ ಸತತ ದಯಾಸಾಗರ ಗಹನಮಹಿಮ ಸದ್ಗುಣಗಣ ಸಾಂದ್ರ ಸ- ಸ್ನೇಹಿತನಾಗಿಪ್ಪ ದೇವೋತ್ತುಂಗಾ ಸಂಗ ಮಹದೇವ ಜ್ಞಾನಾಕಾಯಾ ಶಿವಮೂರ್ತಿ ಶುದ್ಧಮೂರ್ತಿ ಬಹಿರಂತರ ನಿತ್ಯವ್ಯಾಪ್ತ ನಿತ್ಯ ತೃಪ್ತ ಮಹಿಯೊಳು ಈ ಕ್ಷೇತ್ರ ಸುತ್ತು ಮೂರುಯೋಜನ ಸಹ ಜವೋ ಹರಿಹರವೆಂಬೋ ಪೆಸರೂ ಗುಹಶಯನನಾದ ನಮ್ಮ ವಿಜಯವಿಠಲ ರೇಯಾ ಮಹಿಧರನಂದನೆ ವಾಸವಿಲಾ ಸ ॥೧॥ ಮಟ್ಟತಾಳ ಅಸುರ ಗುಹನಂದು ಪಸರಿಸಿ ತಪವನೊ ಅಸುವ ದಂದಿಸಿ ಮಹ ಪೆಸರಾಗೆ ನಿರುತದಲಿ ಬಿಸಿಜ ಭವನು ಮೆಚ್ಚಿ ನಸುನಗುತ ಖಳಗೆ ಅಸುರ…