Haridasa Sahitya — Vyasadasa
Tirthakshetra Sulaadi 84 — Koteshwara mahime sulaadhi
ಸುಳಾದಿ ೮೪ — ಕೋಟೇಶ್ವರ ಮಹಿಮೆ ಸುಳಾದಿ
Composer: Vijaya Dasaru · Deity: Koteshwara / Shiva · Genre: Sulaadi
Kannada lyrics
ಪಶ್ಚಿಮ ಸಾಗರ ತೀರಸ್ಥ ಧರ್ಮಪುರಿಸ್ಥ ಕೋಟೀಶ್ವರ ಮಹಿಮೆ ಸುಳಾದಿ ರಾಗ ವಲಚಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ - ಮುದ್ರದೊಳಗೆ ಹತ್ತು ಮಹಾಕಲ್ಪಾ ಇದ್ದು ಕಾರೋದಕ ಪಾನಮಾಡಿ ಪದವಿ ಸಿದ್ಧ ಮಾಡಿಕೊಂಡು ನರಸಿಂಹನನ್ನು ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು ತ್ರಿದ್ದಶರಲ್ಲಿ ಮಹಾದೇವನೆನಿಸಿ ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸಿ ನಿರ್ದೋಷರಾಗುವರು ಸಜ್ಜನರೂ ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲ್ಲಿ ಇರುತಿಪ್ಪನು ತನ್ನ ಪರಿವಾರದ ಒಡನೆ ಸಿರಿ…