Haridasa Sahitya — Vyasadasa

Tirthakshetra Sulaadi 83 — Sri subrahmanya mahatma sulaadhi

ಸುಳಾದಿ ೮೩ — ಶ್ರೀಸುಬ್ರಹ್ಮಣ್ಯ ಮಹಾತ್ಮ ಸುಳಾದಿ

Composer: Vijaya Dasaru · Deity: Subrahmanya · Genre: Sulaadi

Kannada lyrics

ಶ್ರೀಸುಬ್ರಹ್ಮಣ್ಯಮಹಾತ್ಮ ಸುಳಾದಿ ರಾಗ ಸಾವೇರಿ ಕುಮಾರಧಾರೆ ತ್ವತ್ತೀರೇ ಮುಕ್ತಿದ್ದಾರೇ ಗುಣಾಕರೇ । ತಪಸ್ತಪಂತಃ ಸನ್ಮಂತ್ರಂ ಜಪಂತಃ ಸ್ಯಾಮ್ ಸಂತತಂ॥ ಸುಬ್ರಹ್ಮಣ್ಯಸ್ಯ ಮಹಿಮಾ ವರ್ಣಿತುಂ ಕೇನ ಶಕ್ಯತೇ। ಯತ್ರೋಚ್ಛಿಷ್ಟಮಪಿ ಸ್ಪಷ್ಟಂ ಶೈತ್ರಿಣಃ ಶೋಧಯತ್ಯಹೋ।। ಧೃವತಾಳ ಪರಮಾಧಿಕಾರಿಗೆ ದೊರಕುವುದೀ ಯಾತ್ರಿ ಹರಿಗುರು ವಿಶ್ವಾಸಾನಿರುತ ಉಳ್ಳವರಿಗೆ ಪರದೈವನಾದ ಸಿರಿ ಪರಶುರಾಮನ ಕ್ಷೇತ್ರ ಧರೆಯೊಳಗಿದೆ ಕನ್ಯಾಕುವರಿ ಗೋಕರಣಾ ಪರಿಯಂತ ಕುರುಹು ಇದರ ಮಧ್ಯ ಪರಿಮಿತಿ ಉಂಟು ತೌಲ ಅರಿಶಿನ ದೇಶ ತುಳುವರಿವರೆಂದು ಕರೆಸುವರು ಮರಳೆ ಇದು ಸಿಂಹಗಿರಿ ಎನಿಸುವುದು ಸ್ಮರಣೆ ಮಾಡಿದರೆ ದುಸ್ತರ ಭವಾಂಬುಧಿ ಉ ತ್ತರಿಸುವುದಾಕ್ಷಣ ಕರಣಶುದ್ಧನ…