Haridasa Sahitya — Vyasadasa

Tirthakshetra Sulaadi 82 — Udupi sri krishna deva sulaadhi

ಸುಳಾದಿ ೮೨ — ಉಡುಪಿ ಶ್ರೀಕೃಷ್ಣ ದೇವರ ಸುಳಾದಿ

Composer: Vijaya Dasaru · Deity: Krishna · Genre: Sulaadi

Kannada lyrics

ಉಡುಪಿ ಶ್ರೀಕೃಷ್ಣ ದೇವರ ಸುಳಾದಿ ರಾಗ ಕಾಂಬೋಧಿ (ಉಡುಪಿಯ ಕೃಷ್ಣನನ್ನು ಸ್ತೋತ್ರಗೈಯುವ ಸುಳಾದಿ) ಧ್ರುವತಾಳ ಎಲ್ಲೆ ವೈಭೋಗಾವಿದು ಎಲ್ಲೆ ವೈಭವವಿದು ಎಲ್ಲೆ ಆನಂದಾವಿದು ಎಲ್ಲಿ ಅದ್ಭತವಿದು ಸುಳಾದಿ ಎಲ್ಲಿ ಸೌಖ್ಯಾವಿದು ಎಲ್ಲಿ ವಿಚಿತ್ರವಿದು ಎಲ್ಲೆ ಐಶ್ವರ್ಯವಿದು ಎಲ್ಲಿ ನಾಟಕವಿದು ಎಲ್ಲೆ ಅಮೋಘವಿದು ಎಲ್ಲಿ ಪರಾಕು ಇದು ಎಲ್ಲಿ ಸ್ತೋತ್ರವಿದು ಎಲ್ಲಿ ಪರಿವಾರವಿದು ಎಲ್ಲಿ ವಾಲಗವಿದು ಎಲ್ಲೆಲ್ಲಿ ನೋಡಿದರು ಇಲ್ಲವೊ ನಿನ್ನ ಸರಿ ಬಲ್ಲಿದರಿಳಿಯೊಳು ಸಲ್ಲುವಾದಿದು ಇಂದೆ ಅಲ್ಲದೆ ದ್ವಾರಾವತಿ ವಲ್ಲಭಾ ಗೋಕುಲದಲ್ಲಿ ನಿಂದಾಡಿದಾಗ ಗೊಲ್ಲರ ಮಕ್ಕಳೊಡನೆ ಕಳ್ಳತನಕೆ ಸರುವಾ ದಲ್ಲಿ ಸಂಚರಿಸಿದ್ದು ಎಲ್ಲ ದೇವರದೇವ ಕಲ್ಲಿದಾಗರ ಪೆಗಲಿ…