Haridasa Sahitya — Vyasadasa

Tirthakshetra Sulaadi 81 — Udupi krishna sulaadhi

ಸುಳಾದಿ ೮೧ — ಉಡುಪಿ ಕೃಷ್ಣ ಸುಳಾದಿ

Composer: Vijaya Dasaru · Deity: Krishna · Genre: Sulaadi

Kannada lyrics

ಉಡುಪಿ ಕೃಷ್ಣ ಸುಳಾದಿ ರಾಗ ಬೃಂದಾವನ ಸಾರಂಗ ಧ್ರುವತಾಳ ಸುಳಿನಾಭಿ ಸುಮನೋಹರವಾದ ಉದರ ತ್ರಿ - ವಳಿಯಲ್ಲಿ ತ್ರಿಲೋಕಾಶ್ರಯ ಮಾಡಿಕೊಂಡಿರೆ ಎಳೆ ತುಳಸಿ ಕೌಸ್ತುಭಮಣಿ ಶಿರಿ ವತ್ಸ ಪರಿ - ಮಳ ದ್ರವ್ಯ ಸೂಸುತಿರೆ ಸರ್ವಾಂಗದಲ್ಲಿ ನಿತ್ಯ ಬೆಳಗುವ ಎಳೆನಗೆ ಕುಂದ ಕುಸುಮದಂತೆ ನಳನಳಿಸುವ ನಳಿತೋಳು ಉನ್ನತ ಬಾಹು - ಗಳ ಕರ್ಪೂರಾದ ಕರಡಿಗೆ ಯಂದಾದಿ ವನಾ ಗಿಳಿ ವಿಂಡು ಸೋಲುವಧರ ಕಪೋಲ ಕರ್ನ ವೊಲಿವೊ ಕುಂಡಲ ಮುಂಬಣೆಯಲ್ಲಿ ತೂಗುವ ಅಳಿಯಗೂದಲು ವಿಸ್ತಾರ ನೊಸಲು ತಿಲಕ ಚಲುವ ಕಂಕಣ ಕಡಗ ಬೆರಳಾ ನಾನಾ ಉಂಗುರ ಪೊಳೆವ ನವರತ್ನ ವೈಜಯಂತಿ ಮಾಲೆ ಸೊಬಗು ದಳವಾದ ಪಾದ ಕನಕಸೂತ್ರಾ ನವ ಉ - ತೈಲದಳ ಲೋಚನಾ ಮಂಡಲಾ ಮಂಡಿತದೇವ ಝಳಝಳಿಸುವ ಜಗಮೋಹಪಾ ವಿ…