Haridasa Sahitya — Vyasadasa

Tirthakshetra Sulaadi 79 — Sri Udupi yatre mahima sulaadhi

ಸುಳಾದಿ ೭೯ — ಶ್ರೀಉಡುಪಿ ಯಾತ್ರೆ ಮಹಿಮಾ ಸುಳಾದಿ

Composer: Vijaya Dasaru · Deity: Krishna · Genre: Sulaadi

Kannada lyrics

ಶ್ರೀಉಡುಪಿ ಯಾತ್ರೆ ಮಹಿಮಾ ಸುಳಾದಿ ರಾಗ ಕಾಪಿ ಧ್ರುವತಾಳ ಆವ ಸುಕೃತವೊ ಮತ್ತಾವ ಗುರುಗಳ ದಯವೊ ಆವಾವ ಗೋತ್ರದಲ್ಲಿ ಉದ್ಭವಿಸಿದ ಫಲವೊ ಆವ ಪುತ್ರನು ಸತ್ಕರ್ಮ ಮಾಡಿದ ಪುಣ್ಯವೊ ಆವ ನಿಜರಾಣಿ ನಡಕೊಂಡ ಬಗೆಯೊ ಆವ ಸುಜನ ಬ್ರಾಹ್ಮಣರು ಹರಸೀದ ಹರಕೀಯೊ ಆವ ಬಾಂಧವನು ಪೇಳಿಕೊಟ್ಟ ಮಾರ್ಗವೊ ಆವ ಕ್ಷೇತ್ರದಲ್ಲಿ ಮಾಡಿದ ಸಾಧನವೊ ಆವ ತಾತ್ವಿಕರು ಪ್ರೇರಿಸಿದ ಭಾಗ್ಯವೊ ಆವಾವದು ಎನಗೆ ಒಂದಾದರು ತಿಳಿಯದು ಭಾವಜ್ಞರು ಬಲ್ಲರು ಸ್ಥಿತಿಗತಿಯಾ ಈ ಉಡುಪಿನ ಯಾತ್ರೆ ಮಾಡುವಗೋಸುಗ ಪಾವಮಾನಿಯ ಮತದಲ್ಲಿ ಪೊಂದಿ ನಿತ್ಯ ಪಾವನರಾಗಿ ನಡೆತಂದವರ ಸೌಭಾಗ್ಯ ದೇವತಿಗಳು ಕೊಂಡಾಡುವರು ಜೀವನಮುಕ್ತನಾವಾ ಕುಲಗೋತ್ರರೊಡಗೂಡಿ ಕೈವಲ್ಯಾದಲ್ಲಿ ಮುಂದೆ ಸುಖಿಸು…